
ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಭಾರತದ ಸಂವಿಧಾನ ವಿಶೇಷ ಉಪನ್ಯಾಸ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,2- ಬ್ರಿಟಿಷರ ಸಾಮ್ರಾಜ್ಯ ಶಾಹಿಯಲ್ಲಿ ನಲುಗಿ ಹೋಗಿದ್ದ ಭಾರತೀಯರನ್ನು ತಳಮಟ್ಟದಿಂದ ಮೇಲಕ್ಕೆ ಏರಿಸಿದ ಕೀರ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಅತಿಥಿ ಉಪನ್ಯಾಸಕ ರ ಸಂಘದ ರಾಜ್ಯಾಧ್ಯಕ್ಷ ಡಾ ಟಿ ದುರ್ಗಪ್ಪ ಅವರು ಹೇಳಿದರು.
ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಭಾರತ ಸಂವಿಧಾನ ಮತ್ತು ಡಾ ಬಿ ಆರ್ ಅಂಬೇಡ್ಕರ್ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡುತ್ತಾ ಮಹಿಳಾ ಮೀಸಲಾತಿ ಶಿಕ್ಷಣದ ಸಾರ್ವತ್ರಿಕರಣ ಭೂಮಿಯ ರಾಷ್ಟ್ರೀಕರಣ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸೇರಿದಂತೆ ಸಾಮಾಜಿಕ ಆರ್ಥಿಕ ಸಮಾನತೆಯಂತಹ ವಿಚಾರಧಾರೆ ಸಾರ್ವಕಾಲಿಕವಾಗಿದೆ ಎಂದು ನುಡಿದರು.
ಕಾಲೇಜು ಪ್ರಾಂಶುಪಾಲ ಡಾ ಮಲ್ಲಿಕಾರ್ಜುನ ಮೋಕ ಅವರು ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿ ಇಡೀ ವಿಶ್ವವೇ ಭಾರತದೆಡೆಗೆ ನೋಡುವಂತೆ ಮಾಡಿದ ಮಹಾನು ಭಾವರಾಗಿದ್ದಾರೆ ಎಂದರು ರಾಜ್ಯಶಾಸ್ತ್ರ ವಿಭಾಗದ ಜಗದೀಶ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ ತೇಜಸ್ವಿನಿ ಮಾತನಾಡಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ ವೈ ಜನಾರ್ದನ ರೆಡ್ಡಿ ಐಕ್ಯೂ ಎಸಿ ಸಂಚಾಲಕ ಡಾ ಬಿ ವೀರೇಶ್ ಪ್ರಾಧ್ಯಾಪಕರಾದ ಸಿದ್ದೇಶ ಮಾರಪ್ಪ ಏಕೆ ವರಲಕ್ಷ್ಮಿ ಸುಭಾನ್ ಸಾಬ್ ನಬೀಸಾಬ್ ಕಾಲೇಜು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರಿದ್ದರು.