
ಅನಾಮಧೇಯ ವ್ಯಕ್ತಿ ಸಾವು : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಿಣಿಗೇರಾ ಗ್ರಾಮದ ಗಂಗಾವತಿ ಸರ್ಕಲ್ ಹತ್ತಿರ ಸುಮಾರು 30 ರಿಂದ 35 ವರ್ಷದ ಅನಾಮಧೇಯ ವ್ಯಕ್ತಿಯು ಮೃತಪಟ್ಟಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 27ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯ ಮೃತ ದೇಹ ಕಂಡು ಬಂದಿರುತ್ತದೆ ಎಂದು ಗಿಣಿಗೇರಾ ಗ್ರಾಮದ ಸಾರ್ವಜನಿಕರು ಪೊಲೀಸ್ ಠಾಣೆಗೆ ಕರೆ ನೀಡಿದ ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಈ ವ್ಯಕ್ತಿಯು ಯಾವುದೋ ರೋಗದಿಂದ ಮತ್ತು ಹಸಿವಿನಿಂದ ಬಳಲಿ ನಿಶಕ್ತನಾಗಿ ನೀರು, ಊಟ ಇಲ್ಲದೇ ಮೃತಪಟ್ಟ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಈ ಮೃತ ವ್ಯಕ್ತಿಯ ಸಂಬಂಧಿಕರು ಹಾಗೂ ವಾರಸುದಾರರಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ: 08539-230111, ಕೊಪ್ಪಳ ಡಿ.ಎಸ್.ಪಿ ದೂ.ಸಂ: 08539-222433, 9480803720, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ದೂ.ಸಂ: 9480803746 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.