
ಅಪಾರ ಭಕ್ತ-ಸಮೂಹ-ಮಧ್ಯೆ-ತಾತನ-ಜೋಡು ರಥೋತ್ಸವ
ಕರುನಾಡ ಬೆಳಗು ಸುದ್ದಿ
ಗಂಗಾವತಿ,23- ನಗರದ ಸರ್ವ ಜನರ ಆರಾಧ್ಯ ದೈವ ಶ್ರೀ ಚನ್ನ ಬಸವತಾತನ ಜೋಡು ಮಹಾರಥೋತ್ಸವ ಅಪಾರ ಭಕ್ತ ಸಮೂಹ ಮಧ್ಯೆ ಜರುಗಿತು. ಪ್ರತಿವರ್ಷ ದಂತೆ ಈ ವರ್ಷವೂ ಬೆಳ್ಳಿಗ್ಗೆ ತಾತನ ಮಡಿತೇರು ನಡೆಯಿತು.
ಪಾದಯಾತ್ರೆ-ಜಿಲ್ಲೆಯಿಂದ ಸುಮಾರು ೨೦ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಶ್ರೀ ಚನ್ನ ಬಸವ ತಾತನ ಸನ್ನಿದಿಗೆ ಆಗಮಿಸುತ್ತಾರೆ. ಸರ್ವಭಕ್ತರಿಗೂ ಪ್ರಸಾದ- ಜಾತ್ರೆಗೆ ಆಗಮಿಸಿದ ಸರ್ವ ಅಪಾರ ಭಕ್ತ ಸಮೂಹಕ್ಕೆ ಪ್ರಸಾದ (ಊಟದ) ವ್ಯವಸ್ಥೆ ಮಾಡಲಾಗಿತ್ತು. ಸಂಸದ ಸಂಗಣ್ಣ ಕರಡಿ,ಶಾಸಕ ಜನಾರ್ಧನ ರೆಡ್ಡಿ,ಮಾಜಿ ಶಾಸಕ ಪರಣ್ಣ ಮುನವಳ್ಳಿ,ಹೆಚ್.ಆರ್,ಶ್ರೀ ನಾಥ, ಮಾಜಿ ಸಂಸದ ಶಿವರಾಮಗೌಡ ಬಂದ ಭಕ್ತರಿಗೂ ದಾಸೋಹ ವ್ಯವಸ್ಥೆ ಯಲ್ಲಿ ಊಟಕ್ಕೆ ಹಾಕಿ(ಬಡಸಿ-ನಿಡಿ) ಸೇವೆಗೈದರು. ಸಾಯಂಕಾಲ ಜರುಗಿದ ತಾತನ ಜೋಡು ರಥೋತ್ಸವಕ್ಕೆ ಭಕ್ತರು ಉತ್ತತಿ ಎಸೆದು ಭಕ್ತಿ ಸರ್ಮಪಿಸಿದರು.
ಜೈಶ್ರಿರಾಮ ಘೋಷಣೆ- ಜಾತ್ರೆಯಲ್ಲಿ ಪಾಲೋಂಡ ಯುವ ಸಮೂಹವು ಜೈಶ್ರೀರಾಮ ಘೋಷಣೆ ಹಾಗೂ ಹರಹರ ಮಹಾದೇವ ಘೋಷಣೆಗಳನ್ನು ಮೋಳಗಿಸಿದರು. ಈಸಂದರ್ಭದಲ್ಲಿ ಶಾಸಕ ಜನಾರ್ಧನರೆಡ್ಡಿ,ಮಾಜಿ ಶಾಸಕ ಪರಣ್ಣ ಮುನವಳ್ಳಿ,ಜಿ ವಿರಪ್ಪ,ಹೆಚ್. ಆರ್.ಶ್ರೀ ನಾಥ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ,ಇಕ್ಬಾಲ್ ಅನ್ಸಾರಿ,ಮಾಜಿ ಸಂಸದ ಶಿವರಾಮಗೌಡ,ಟಿಎಪಿಸಿಎಂಎಸ್ ಅಧ್ಯಕ್ಷ ರಾಜಶೇಖರಪ್ಪ ಗುಂಜಳ್ಳಿ,ವಿರುಪಾಕ್ಷಪ್ಪ ಸಿಂಘನಾಳ,ಸಮಿತಿಯ ಹೋಸಳ್ಳಿ ಶಂಕರಗೌಡ,ಚನ್ನಬಸಯ್ಯಸ್ವಾಮಿ,ಶರಣೆಗೌಡ ಮಾಲಿ ಪಾಟಿಲ,ಜೋಗದ ಹನುಮಂತಪ್ಪ ನಾಯಕ,ವಿರಭದ್ರಪ್ಪ ನಾಯಕ,ವಾಸುದೇವ ನವಲಿ,ಅರಳಿ ಶೆಖರಪ್ಪ,ಶ್ಯಾಮಚಾರ್ಯ ಜೋಶಿ,ಉದಯ ಜಹಾಗಿರದಾರ,ನಾಗರಾಜ ಕೋತ್ವಾಲ ಮುಂತಾದವರು ಉಪಸ್ಥಿತರಿದ್ದ