
ವಚನಕಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯ ಪೂರ್ವ ಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ತಾಲೂಕು ಕಚೇರಿಯಲ್ಲಿ ತಾಲೂಕ ಆಡಳಿತದಿಂದ ಜುಲೈ 21ರಂದು ಜರುಗುವ ವಚನಕಾರ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲು ಪೂರ್ವಭಾವಿ ಸಿದ್ಧತೆಯ ಅಧ್ಯಕ್ಷತೆ ವಹಿಸಿದ ತಾಹಸಿಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ಎಚ್ ವಿಶ್ವನಾಥ ಅವರ ನೇತೃತ್ವದಲ್ಲಿ ನಡೆಯಿತು.
ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎ ಗಾದಿಲಿಂಗಪ್ಪ ಅವರು ಸ್ವಾಗತಿಸಿದರು ನಗರಸಭಾ ಪೌರಾಯುಕ್ತ ಎಚ್ ಎನ್ ಗುರುಪ್ರಸಾದ್ ಅವರು ವಂದಿಸಿದರು ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ವ್ಯವ ಸ್ಥಾಪಕಿ ಸುಜಾತ ಕೋರಿ ಶಿರಸ್ತೆ ದಾರ ಸಿದ್ದಾರ್ಥ ಕಾರಂಜಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಾಮಾಜಿಕ ಸುಧಾರಕ ಅಬ್ದುಲ್ ನಬಿ ಹಡಪದ ಅಪ್ಪಣ್ಣ ಸಮುದಾಯದವರು ಇದ್ದರು .
ತಹಸಿಲ್ದಾರ್ ಅವರು ಮಾತನಾಡಿ ತಾಲೂಕ ಮಟ್ಟದ ಅಧಿಕಾರಿಗಳು ಪೂರ್ವಭಾವಿ ಸಭೆಗಳಲ್ಲಿ ಹಾಜರಿರಬೇಕು ಆದರೆ ಹಾಜರಾಗುತ್ತಿಲ್ಲ ಅಂಥವರಿಗೆ ಮುಂದಿನ ಸಭೆಗಳಲ್ಲಿ ಹಾಜರಿರುವಂತೆ ನೋಟಿಸ್ ನೀಡಲಾಗುವುದು ಎಂದರು.