c43deb84-3964-4d10-98e8-4c5b0b8905bd

ಅಭಿವೃದ್ಧಿಗೆ ಉದ್ಯೋಗ ಖಾತರಿ ಯೋಜನೆ ನೆರವಾಗಿದೆ:

ಜಿಪಂ ಸಿಇಓ ರಾಹುಲ್ ಶರಣಪ್ಪ ಸಂಕನೂರ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೫- ಜಿಲ್ಲೆಯ ಅಭಿವೃದ್ಧಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗಿದ್ದು, ಜಲಸಂರಕ್ಷಣೆ, ಮೂಲಸೌಕರ್ಯ ಸ್ವತ್ತುಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಶ್ರೀಧರಗಡ್ಡ ಗ್ರಾಮ ಪಂಚಾಯತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳಾದ ಶಾಲೆ ಅಭಿವೃದ್ದಿ, ಸ್ಮಶಾನ ಅಭಿವೃದ್ದಿ, ಅಂಗನವಾಡಿ, ರಸ್ತೆ ಕಾಮಗಾರಿಗಳು ಮತ್ತು ಸಂಜೀವಿನಿ ಶೆಡ್ ಕಾಮಗಾರಿಗಳಿವೆ. ಅವುಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಎಲ್ಲಾ ಚುನಾಯಿತಿ ಪ್ರತಿಧಿಗಳು ಗ್ರಾಮಗಳ ಸವಾರ್ಂಗೀಣ ಅಭಿವೃದ್ದಿಗೆ ಶ್ರಮ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹೊಸ ಪಂಚಾಯತಿ ಕಟ್ಟಡದ ಆವರಣದಲ್ಲಿ ಸಸಿ ನೆಟ್ಟರು. ಕೂಲಿ ಕಾರ್ಮಿಕರುಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕೂಲಿಕಾರರ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲೆಯಲ್ಲಿ ಸ್ಪರ್ದೆಯನ್ನು ಏರ್ಪಡಿಸಿ, ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉದ್ಯೋಗ ಚೀಟಿಯನ್ನು ನೀಡಿದರು. ಕೂಸಿನ ಮನೆಯ ಕೇರ್ ಟೇಕರಸ್‍ಗಳಿಗೆ ಪ್ರಮಾಣ ಪತ್ರವನ್ನು ನೀಡಿದರು. 100 ದಿನ ಪೂರೈಸಿದ ಕುಟುಂಬಗಳಿಗೆ ಅಂಗಿ ಮತ್ತು ಕ್ಯಾಪ್‍ಗಳನ್ನು ನೀಡಿದರು. ವಿಶೇಷ ಚೇತನರಿಗೆ ಕ್ರೀಡೆಯನ್ನು ಏರ್ಪಡಿಸಿ ಸನ್ಮಾನಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರ್ಮಿಕರು ವಿವಿದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಲ್ಲಾ ಐಇಸಿ ಸಂಯೋಜಕರು, ಪಿಡಿಓ, ತಾಲೂಕು ನರೇಗಾ ಸಿಬ್ಬಂದಿಗಳು, ಎಲ್ಲಾ ತಾಂತ್ರಿಕ ಸಹಾಯಕರು, ಬಿಫ್ಟಿಗಳು, ಗ್ರಾಮ ಕಾಯಕ ಮಿತ್ರರು ಮೇಟಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು, ಎನ್ ಆರ್ ಎಲ್ ಎಮ್ ಅ

Leave a Reply

Your email address will not be published. Required fields are marked *

error: Content is protected !!