
ಇಟಿಗೆಹಾಳು: ಚೆಕ್ ಪೋಸ್ಟ್ ನಲ್ಲಿ 1,63,500 ರೂ ದಾಖಲೆ ಇಲ್ಲದ ಹಣ ವಶ ತಹಸಿಲ್ದಾರ್ ಶಂಶೇ ಆಲಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ತಾಲೂಕು ಇಟ್ಟಿಗೆ ಹಾಳು ಚೆಕ್ ಪೋಸ್ಟ್ ನಲ್ಲಿ ಸಿರುಗುಪ್ಪ ಕಡೆಯಿಂದ ಬುಧುವಾರ ರಾತ್ರಿ ಆದೋನಿ ಕಡೆಗೆ ಸಾಗುತ್ತಿದ್ದ ವಾಹನ ಎಪಿ 40 ಹೆಚ್ 2326 ಸಿಫ್ಟ್ ಕಾರನ್ನು ಪೊಲೀಸರು ತನಿಕಾ ಅಧಿಕಾರಿಗಳಾದ ಕೋರಿ ಜಗದೀಶ್ ಕೋರಿ ಬಸವರಾಜ್ ಅವರು ತಡೆದು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ದಾಖಲೆ ಇಲ್ಲದ 1,63,500 ರೂ ಹಣವನ್ನು ವಶ ಪಡಿಸಲಾಗಿದೆ ಎಂದು ತಹಸಿಲ್ದಾರ್ ಶಂಶೇ ಆಲಂ ಅವರು ಪತ್ರಿಕೆಗೆ ತಿಳಿಸಿದರು.
ಈ ಹಣದ ಬಗ್ಗೆ ಸಿಬ್ಬಂದಿಯವರನ್ನು ವಿಚಾರಿಸಿದಾಗ ಯಾವುದೇ ದಾಖಲೆ ಮಾಹಿತಿ ನೀಡಿಲ್ಲದಿರುವುದರಿಂದ ಹಣ ಎಲ್ಲಿಂದ ಬಂತು ಯಾರಿಗೆ ಸೇರಿದ್ದು ಮತ್ತು ಯಾರಿಗೆ ತಲುಪಿಸಬೇಕು ಎಂಬುದರ ಸತ್ಯ ತನಿಖೆ ನಂತರ ಗೊತ್ತಾಗಲಿದೆ ಎಂದು ತಹಸಿಲ್ದಾರ್ ಶಂಶೇ ಆಲಂ ಅವರು ವಿವರಿಸಿದ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿ ಗೊಂಡಿದೆ ಬಿಗಿ ಭದ್ರತೆಯಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂದು ನುಡಿದರು.