
ಎಡುನರ್ಚರ್ ಇಂಗ್ಲೀಷ ಮಿಡಿಯಮ್ ಸ್ಕೂಲ್
ಜ,೧೮ರಂದು 14ನೇ ಶಾಲಾ ವಾರ್ಷಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭- ನಗರದ ಎಡುನರ್ಚರ್ ಇಂಗ್ಲೀಷ ಮಿಡಿಯಮ್ ಸ್ಕೂಲ್ನ 14ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಕೃತಿಕ ಕಾರ್ಯಕ್ರಮ ಇದೇ ಜ, ೧೮ರಂದು ಗುರುವಾರ ಸಂಜೆ 3ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಖಾಸಗಿ ಶಾಲಾ ಆಡಲಿತ ಮಂಡಳಿಗಳ ಒಕ್ಕುಟದ ಅಧ್ಯಕ್ಷ ಗಿರೀಶ ಕಣವಿ,ಶಾರದಾ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯ ರಾಜಶೇಖರ ಚರ್ಕವರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಚೆನ್ನಪ್ಪ ತಳವಾರ, ಬ್ರಾಹ್ಮಣ ಮಹಾಸಭಾದ ಮಹಿಳಾ ಅಧ್ಯಕ್ಷೆ ವೈಷ್ಣವಿ ಹುಲಗಿ ಹಾಗೂ ಉಪಾಧ್ಯಕ್ಷೆ ಮದುರಾ ಕರಣಂ ಇತರರು ಆಗಮಿಸಲಿದಾರೆ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೋಳಿಸುವಂತೆ ಶಾಲಾ ಮುಖ್ಯಸ್ಥರಾದ ಲ್ಕಕ್ಷ್ಮೀಕಾಂತ ಗುಡಿ ಹಾಗೂ ಗುರುರಾಜ ಗುಡಿ ತಿಳಿಸಿದ್ದಾರೆ.