
ಐಟಿಐ ಅಪರೆಂಟಿಶಿಪ್ ಟ್ರೈನಿಂಗ್ ಗಾಗಿ
ಏ 23ರಂದು ಕ್ಯಾಂಪಸ್ ಸಂದರ್ಶನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ನಗರದ ಎಸ್ ಜಿ ಗಂಜ್ ಕೊಪ್ಪಳ ದಲ್ಲಿರುವ ಸರ್ವೋದಯ ರೂರಲ್ ಐಟಿಐ ಕೊಪ್ಪಳ ( ITI ) ದಲ್ಲಿ ಗಿಣಿಗೇರಾದ ಬೇವಿನಹಳ್ಳಿಯಲ್ಲಿರುವ ಮೆ: ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನ ಎ, 23 ಬುಧವಾರ ದಂದು ಬೆಳಿಗ್ಗೆ 10.30 ಕ್ಕೆ ಜುರುಗಲಿದೆ.
ಈ ಕುರಿತು ಪ್ರಕಟಣೆ ನೀಡಿದ್ದು ಸದರಿ ಸಂದರ್ಶನದಲ್ಲಿ ಕರ್ನಾಟಕ ರಾಜ್ಯದ್ಯಂತ ವಿವಿಧ ಸರಕಾರಿ/ ಅನುದಾನಿತ/ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಎಂ. ಎಂ. ವಿ, ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ವೃತ್ತಿಗಳಲ್ಲಿ ಪಾಸಾದ ಹಾಗೂ ದ್ವಿತೀಯ ವರ್ಷ ದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು. ಕಾರಣ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜೆರಾಕ್ಸ್ , ಐಟಿಐ ಅಂಕಪಟ್ಟಿ, ಜಾತಿ ಆದಾಯ ಪ್ರಮಾಣ ಪತ್ರ, ಜೆರಾಕ್ಸ್, ಆಧಾರ್ ಕಾರ್ಡುಗಳ ಎರಡು ಜೆರಾಕ್ಸ್ ಪ್ರತಿಗಳು ಹಾಗೂ ಐದು ಪಾಸ್ಪೋರ್ಟ್ ಸೈಜ್ ಫೋಟೋ ಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸರ್ವೋದಯ ರೂರಲ್ ಐಟಿಐ ಪ್ರಾಚಾರ್ಯರು ದೂ: 8105369692,9986182333, 7204049588, 8861269353,9538332095 ಸಂಪರ್ಕೀಸಲೂ ಕೋರಿದ್ದಾರೆ.