
*ಕನ್ನಡ ಜ್ಯೋತಿ ರಥಯಾತ್ರೆಗೆ
ಕೊಪ್ಪಳ ಗಡಿಭಾಗದಲ್ಲಿ ಅದ್ದೂರಿ ಸ್ವಾಗತ*
—
ಕೊಪ್ಪಳ ,02- ಮುನಿರಾಬಾದ್ ನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮುನಿರಾಬಾದ್ ಗ್ರಾಪಂ ಆಡಳಿತದಿಂದ ನವೆಂಬರ್ 02ರಂದು ರಾತ್ರಿ 8 ಗಂಟೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಎನ್ ಹೆಚ್ 50 ರ ಬಳಿಯ ಮುನಿರಾಬಾದ್ ಗ್ರಾಮದ ಹತ್ತಿರದಲ್ಲಿ ನಡೆದ ಸಮಾರಂಭದಲ್ಲಿ ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಜನಾರ್ಧನ ರೆಡ್ಡಿ,
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮಾರಬನಳ್ಳಿ ಹಾಗೂ ಇನ್ನೀತರ ಗಣ್ಯರು ನಾಡ ಧ್ವಜ ತೋರಿಸುವ ಮೂಲಕ ಜ್ಯೋತಿ ರಥಯಾತ್ರೆಗೆ ಅರ್ಥಪೂರ್ಣ ಸ್ವಾಗತ ಕೋರಿದರು. ಈ ವೇಳೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಾಹಿತಿಗಳು, ಕಲಾವಿದರು, ಕನ್ನಡಪರ ಹಾಗೂ ಇನ್ನಿತರ ಸಂಘಟನೆಗಳ ಪ್ರಮುಖರು ಗ್ರಾಮಸ್ಥರು ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
*ಮುನಿರಾಬಾದ್ ಗ್ರಾಪಂನಿಂದ ಸ್ವಾಗತ ಬೀಳ್ಕೊಡುಗೆ:*
ಮುನಿರಾಬಾದ್ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು
ಎನ್ ಹೆಚ್ 50ರ ಹತ್ತಿರದಲ್ಲಿ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿ ಬೀಳ್ಕೊಟ್ಟರು. ಮುನಿರಾಬಾದ್ ಗ್ರಾಪಂನ ಅಧ್ಯಕ್ಷರಾದ ಅಯುಬಖಾನ್, ಉಪಾಧ್ಯಕ್ಷರಾದ ಸೌಭಾಗ್ಯ ನಾಗರಾಜ, ಸದಸ್ಯರಾದ ಯಶೋಧಾ, ರವೇಲಾ, ಕಮಲಾ, ರಾಘವೇಣಿ, ಘಾಳೆಪ್ಪ, ಬಿದ್ದಪ್ಪ, ಹಾಜರಾಬೇಗಂ, ಸುಬಾನ್, ವೆಂಕೋಬದಾಸ್, ಮಾಜಿ ತಾಪಂ ಸದಸ್ಯ ಬಾಲಚಂದ್ರ ಸೇರಿದಂತೆ ಗ್ರಾಮಸ್ಥರು ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.