
ಕನ್ನಡ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಮುಖ್ಯ
ಜಿ ಸೋಮಶೇಖರ್ ರೆಡ್ಡಿ
ಕರುನಾಡ ಬೆಲಗು ಸುದ್ದಿ
ಬಳ್ಳಾರಿ, ೨೦- ನಗರದ ರಾಘವ ಕಲಾಮಂದಿರದಲ್ಲಿ ನಡೆದ ಕನ್ನಡ ಚೈತನ್ಯ ವೇದಿಕೆಯ 22ನೇ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಬಳ್ಳಾರಿ ನಗರ ಮಾಜಿ ಶಾಸಕರಾದ ಜಿ ಸೋಮಶೇಖರ ರೆಡ್ಡಿ ಅವರು ಇಂದು ಕನ್ನಡ ಭಾಷೆ ಹಾಗೂ ಸಾಂಸ್ಕೃತಿ ಉಳಿಸುವಲ್ಲಿ ಸಂಘಟನೆಗಳ ಪಾತ್ರ ಬಹಳ ದೊಡ್ಡದಾಗಿದೆ. ಕನ್ನಡ ನಾಡಿಗೆ ಧಕ್ಕೆ ಆದಾಗ ಹೋರಾಟ ನಡೆಸುವುದು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಎಂದರು.
ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕರು ಚೋರನೂರು ಕೊಟ್ರಪ್ಪ ಮಾತನಾಡಿ ಕರ್ನಾಟಕ ಎಂದು ಹೆಸರು ಬರಲು ಕಾರಣವಾದ ಮಹನೀಯರನ್ನು ಸ್ಮರಿಸುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಜೊತೆಗೆ ಭಾಷೆಯ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿಸಿದರು
ವೇದಿಕೆಯ ಅಧ್ಯಕ್ಷರು ಬಿಎಸ್ ಪ್ರಭು ಕುಮಾರ್ ಮಾತನಾಡುತ್ತಾ ಸಂಘಟನೆಗಳು ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸಿದಾಗ ಮಾತ್ರ ಹೆಚ್ಚು ಕಾಲ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದರು
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ನಂಜುಂಡೇಶ್ವರ ತಾತನವರು ದಾಸರ ನಾಗೇನಹಳ್ಳಿ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ವೀರಶೇಖರ್ ರೆಡ್ಡಿ .ಕನ್ನಡ ಚೈತನ್ಯ ವೇದಿಕೆಯ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.
ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಎಚ್ ಕೆ ಕಾರ್ ಮಂಚಪ್ಪ . ಹಾಗೂ ವೇದಿಕೆಯ ಹಿರಿಯ ಸದಸ್ಯರಾದ ಬಿ.ಸಿ ಅರವಿಂದ್. ಕಿರಣ್. ಇವರನ್ನು ಸನ್ಮಾನಿಸಿ ಗೌರವಿಸಲಾಯಿತ್ತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ 35 ಶಾಲೆಗಳು ಭಾಗವಹಿಸಿದ್ದವು ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರಕಲಾವಿದ ರಫಿ ಮತ್ತು ವಿನೋದ್ ಚೌಹಾಣ್ ನಡೆಸಿಕೊಟ್ಟರು