
ಕರ್ನಾಟಕ ರಕ್ಷಣಾ ವೇದಿಕೆ
ಕುಕನೂರು ತಾಲೂಕು ಘಟಕದ ನೂತನ ಪದಾಧಿಕಾರಿಗಲ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕುಕನೂರು ೧೮ – ಕರ್ನಾಟಕ ರಕ್ಷಣಾ ವೇದಿಕೆ ಕುಕನೂರು ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಸೋಮವಾರದಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರ ಅಧ್ಯಕ್ಷತೆಯಲ್ಲಿ ಅವಿರೋದವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ನೂತನ ಅಧ್ಯಕ್ಷರಾಗಿ ರಮೇಶ ಮಲ್ಲಪ್ಪ ಹಾಲವರ್ತಿ ಅವರನ್ನು ನೇಮಕಾತಿ ಮಾಡಲಾಗಿ ಕನ್ನಡ, ನಾಡು, ನುಡಿ, ನೆಲ, ಜಲ, ಗಡಿ, ಭಾಷೆಯ ವಿಚಾರವಾಗಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಬೇಕೆಂದು ಹಾಗೂ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ಎದೆಗುಂದದೆ ಜನಪರವಾಗಿ ಹೋರಾಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕ ಶರಣಯ್ಯ ಹಳೆಮನಿ, ತಾಲೂಕ ಯುವ ಘಟಕದ ಅಧ್ಯಕ್ಷ ಆನಂದ ಬಂಡಿ, ನಗರ ಘಟಕದ ಅಧ್ಯಕ್ಷ ಮಂಜುನಾಥ ಜಮಾದಾರ, ಮಂಗಳೂರು ಹೋಬಳಿ ಅಧ್ಯಕ್ಷ ನೀಲನಗೌಡ ಮಾಲಿಪಾಟೀಲ್, ತಾಲೂಕ ಪ್ರಧಾನ ಕಾರ್ಯದರ್ಶಿ ಸಚಿನ್ ಕುದುರಿಮೋತಿ, ತಾಲೂಕ ಉಪಾಧ್ಯಕ್ಷ ಮಾರುತಿ ಅರಕೇರಿ, ತಾಲೂಕ ಕಾರ್ಯದರ್ಶಿ ರವಿಕುಮಾರ ದ್ಯಾಂಪೂರ, ಖಜಾಂಚಿ ಹನುಮಂತ ಹಂಚಿನಾಳ ಹಾಗೂ ಅನೇಕರ ಕಾರ್ಯಕರ್ತರು ಉಪಸ್ಥಿತರಿದ್ದರು.