
ಕರೂರು, ಉತ್ತನೂರು, ಹಳೆಕೋಟೆ ಗ್ರಾ.ಪಂ.ಗಳಿಗೆ ಸಿಇಒ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ತಾಲೂಕು ಕರೂರು ಉತ್ತನೂರು ಹಾಗೂ ಹಳೆಕೋಟೆ ಗ್ರಾಮ ಪಂಚಾಯತಿಗಳಿಗೆ ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಭೇಟಿ ನೀಡಿ ಮಹಾತ್ಮ ಗಾಂಧೀಜಿ ಉದ್ಯೋಗ ಯೋಜನೆ ಯಡಿ ನರೇಗಾ ಕೈಗೊಂಡಿರುವ ಕಾಮಗಾರಿ ಮತ್ತು ಕ್ರಿಯಾ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೂಲಿ ಕಾರರಿಗೆ ಕೆಲಸ ನೀಡಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರು ಸಿರುಗುಪ್ಪ ತಾಲೂಕಿನ ಕರೂರು ಗ್ರಾಮ ಪಂಚಾಯತ್ ನ ಕರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನರೇಗಾ ಯೋಜನೆ ಅಡಿ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಟದ ಮೈದಾನದ ಪರಿಶೀಲನೆ ನಡೆಸಿದರು.
ನಂತರ ಹೊಸ ಶೌಚಾಲಯದ ಕಾಮಗಾರಿಯನ್ನು ಪರಿಶೀಲನೆ ಮಾಡಿದರು ತಾಲೂಕಿನ ಉತ್ತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಟಸೂಗೂರು ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ನಿರ್ಮಿಸಲಾಗುತ್ತಿರುವ ಕೃಷಿ ಹೊಂಡ ನಿರ್ಮಾಣ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರು ಉತ್ತಮವಾದ ಕೆಲಸವನ್ನು ಮಾಡಬೇಕು ಇದರಿಂದ ಒಂದು ಆಸ್ತಿಯನ್ನು ಸೃಜನೇ ಮಾಡಿದಂತಾಗುತ್ತದೆ.
ಸಿರುಗುಪ್ಪ ತಾಲೂಕಿನಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಜಾಬ್ ಕಾರ್ಡ್ ಹೊಂದಿದ ಕೂಲಿಕಾರರಿಗೆ ಕೂಲಿ ಕೆಲಸ ನೀಡಬೇಕು ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ ಕೆರೆ ಅಭಿವೃದ್ಧಿ ಹಳ್ಳ ಅಭಿವೃದ್ಧಿ ಯಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ಹಣ ವಿತರಿಸಬೇಕು ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಅವರಿಗೆ ಸೂಚಿಸಿದರು.
ನರೇಗಾ ಯೋಜನೆ ಅಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳಿಗೆ ಯಂತ್ರ ಬಳಕೆ ಮಾಡದೆ ಜನರಿಂದಲೇ ಕಾಮಗಾರಿ ಪೂರ್ಣಗೊಳಿಸಬೇಕು ನರೇಗಾ ಕಾಮಗಾರಿಗಳನ್ನು ನಿಯಮಾನುಸಾರ ಜನರಿಗೆ ಅವಕಾಶ ನೀಡದ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆ ಯಾಗಬೇಕಾಗುತ್ತದೆ ಎಂದರು.
ನಂತರ ಹಳೆಕೋಟೆ ಗ್ರಾಮ ಪಂಚಾಯತ್ ನ ವ್ಯಾಪ್ತಿಯ ಅರಣ್ಯ ಬೆಳೆಯ ಸ್ಥಳಕ್ಕೆ ಹಾಗೂ ಗೊಬ್ಬರ ಗ್ಯಾಸ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪವನ್ ಕುಮಾರ್ ದಂಡಪ್ಪನವರ್ ನರೇಗಾ ಯೋಜನೆಯ ತಾಲೂಕ ನಿರ್ದೇಶಕ ಮನೋಹರ ಗ್ರಾಮ ಪಂಚಾಯತ್ ಪಿ ಡಿ ಒ ರಾಜೇಶ್ವರಿ ಸಾಕ್ಷರತಾ ಅಬ್ದುಲ್ ನಬಿ ಮತ್ತು ನರೇಗಾ ಯೋಜನೆಯ ಸಿಬ್ಬಂದಿ ವರ್ಗದವರಿದ್ದರು.