
ಕಲ್ಯಾಣ ಕರ್ನಾಟಕದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ
ಪರಂಪರೆಗಳು ಶ್ರೇಷ್ಠ ಶ್ರೀಮಂತವಾಗಿವೆ
ಸಮ್ಮೇಳನಾಧ್ಯಕ್ಷ: ಗುರಪ್ಪ ಪಾಟೀಲ್
ಕರುನಾಡ ಬೆಳಗು ಸುದ್ದಿ
ಯಾದಗಿರಿ, – ಕಲ್ಯಾಣ ರ‍್ನಾಟಕದಲ್ಲಿ ಅಮೋಘರ‍್ಷ ನೃಪತಂಗನ ಆಳ್ವಿಕೆಯಿಂದಲೂ ಇಲ್ಲಿನ ಭಾಷೆ ಸಾಂಸ್ಕೃತಿಕ ಪರಂಪರೆ ಉನ್ನತ ಶ್ರೇಣಿಯಲ್ಲಿದ್ದು ಸೀಮಂತವಾದ ನಾಡಾಗಿತ್ತು.ಈ ಭಾಗದ ಸಾಹಿತಿಗಳು ಬುದ್ಧಿಜೀವಿಗಳು ರಂಗರ‍್ಮಿಗಳು ದೇಶ ಮತ್ತು ರಾಜ್ಯಗಳಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ಹೆಸರುವಾಸಿ ಯಾಗಿದ್ದಾರೆ
ಅನೇಕ ರಂಗಗಳಲ್ಲಿ ಕನ್ನಡ ರ‍್ನಾಟಕದ ಹೆಸರಿನ ಮುಂಚೂಣಿಯಲ್ಲಿ ಇರುವಂತೆ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿನ ವೈವಿದ್ಯತೆ ಮತ್ತು ಬೆಳವಣಿಗೆಗೆ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರವಿದೆ. ಅವರು ರಚಿಸಿದ ಸಾಹಿತ್ಯ ಮತ್ತು ಗೀತೆಗಳ ಮೂಲಕ ಕನ್ನಡ ಬಾಷೆಯಲ್ಲಿನ ಭಾವನೆಗಳ ಜೊತೆಗೆ ಕನ್ನಡಿಗರ ಮನಸ್ಸುಗಳು ಬೆರೆತಿರುವ ಕಾರಣದಿಂದ ಸ್ವಾಭಿಮಾನಿ ಕನ್ನಡಿಗರಾದ ನಾವುಗಳು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತರಾಗಿದ್ದೇವೆ ಎಂದು ಕಲ್ಯಾಣ ರ‍್ನಾಟಕದ ಸಾಂಸ್ಕೃತಿಕ ಸಂಭ್ರಮದ ಎರಡನೇ ಸಮ್ಮೇಳನದ ರ‍್ವಾಧ್ಯಕ್ಷ ಹಿರಿಯ ರಂಗ ಕರ್ಮಿ ಗುರಪ್ಪ ಪಾಟೀಲ್ ಹೇಳಿದರು.
ಯಾದಗಿರಿಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹೈದ್ರಬಾದ ರ‍್ನಾಟಕ ನಾಗರಿಕರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ರ‍್ನಾಟಕ ಸಾಂಸ್ಕೃತಿಕ ಸಂಭ್ರಮದ ೨ನೇ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕನ್ನಡ ಬಾಷೆ, ನೆಲ, ಜಲ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ಪರಿಸರ ಸಂಪನ್ಮೂಲಗಳು ಎಲ್ಲೆಡೆ ಸಮೃದ್ಧಿಯಾಗಿ ಹರಡಿಕೊಂಡಿದೆ. ಶರಣರು, ಕವಿಗಳು, ಸಾಹಿತಿಗಳು, ಕಲಾವಿದರು ಸೇರಿದಂತೆ ಕನ್ನಡ ಪ್ರೇಮಿಗಳು ಮತ್ತು ಹೋರಾಟಗಾರರ ಪರಿಶ್ರಮ ಮತ್ತು ಸಾಧನೆಯನ್ನು ಕನ್ನಡಿಗರಾದ ನಾವುಗಳು ಸ್ಮರಿಸಬೇಕಿದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸುಂದರ ಪರಿಸರದಲ್ಲಿ ಸಾಧು-ಸಂತರು, ಶಿವಶರಣರು, ಕವಿ-ಸಾಹಿತಿಗಳ ಸ್ವಾಭಿಮಾನದ ಸೇವೆಯಿಂದ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿಯಿದೆ.
ಇಂತಹ ಸಮೃದ್ಧ ನಾಡಿನಲ್ಲಿ ಜನಿಸಿರುವುದು ಕನ್ನಡಿಗರ ಅದೃಷ್ಟವಾಗಿದೆ. ಇನ್ನೂ ಹೈದ್ರಬಾದ ರ‍್ನಾಟಕ ನಾಗರಿಕರ ವೇದಿಕೆಯಿಂದ ನಡೆಯುತ್ತಿರುವ ಕಲ್ಯಾಣ ರ‍್ನಾಟಕ ಸಾಂಸ್ಕೃತಿಕ ಸಂಭ್ರಮದ ೨ನೇ ಸಮ್ಮೇಳನದಲ್ಲಿ ನಮ್ಮ ಕಲಬುರಗಿ ಜಿಲ್ಲೆಯ ಸಾಧಕರಿಗೆ ಗುರಿತಿಸಿ ರಾಜ್ಯ ಮಟ್ಟದ ಅಮೋಘರ‍್ಷ ನೃಪತುಂಗ ಪ್ರಶಸ್ತಿ ಪ್ರಧಾನ ಮಾಡುತಿರುವುದು ಶ್ಲಾಘನೀಯವಾಗಿದೆ ಎಂದರು.
ರಂಗಭೂಮಿ ಹಿನ್ನೆಲೆ ಇರುವ ನನ್ನನ್ನು ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಸಂತಸದ ವಿಚಾರ ಕಲ್ಯಾಣ ರ‍್ನಾಟಕದ ರಂಗಭೂಮಿ ಕ್ಷೇತ್ರಕ್ಕೆ ಹಗಲಿರುಳು ದುಡಿಯುತ್ತಿರುವ ಅನೇಕ ರಂಗರ‍್ಮಿಗಳಿಗೆ ರ‍್ಕಾರಗಳು ಪ್ರಶಸ್ತಿ ಹಾಗೂ ಅವಕಾಶಗಳನ್ನು ನೀಡಬೇಕೆಂದು ಆಗ್ರಹಿಸಿದರು…ನನ್ನ ಪಾಪ ತೊಳದ ಪುಣ್ಯವಂತೆ ಸಾಮಾಜಿಕ ನಾಟಕದ ೪೫೦ಕ್ಕೂ ಹೆಚ್ಚು ಪ್ರರ‍್ಶನ ಕಂಡಿರುವುದು ಸಂತಸವನ್ನು ನೀಡಿದೆ ನನ್ನನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಗುರುತಿಸಿ ಆಯ್ಕೆ ಮಾಡಿದ ಈ ಸಂಸ್ಥೆಗೆ ನನ್ನ ವಂದನೆ ನನ್ನ ಹಾಗೆ ಎಲೆಯ ಮರೆಯ ಕಾಯಿಯ೦ತಿರುವ ಪ್ರತಿಭೆಗಳಿಗೆ ಸಮಾಜ ಹಾಗೂ ರ‍್ಕಾರ ಮನ್ನಣೆ ನೀಡ ಬೇಕಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ನಾಟಕಗಳಿಗೆ ಹೆಚ್ಚಿನ ಆದ್ಯತೆ ಇದೆ ಅದಕ್ಕೆ ರಂಗಭೂಮಿಗಾಗಿ ಸಮಾಜ ಮತ್ತು ಸರ‍್ವಜನಿಕರು ಶ್ರಮಿಸಬೇಕು ಎಂದರು
ಸಮ್ಮೇಳನವನ್ನ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಯಾದಗಿರಿಯ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿಯವರು ಕಲ್ಯಾಣ ರ‍್ನಾಟಕದಲ್ಲಿ ಈ ರೀತಿಯ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು ಈ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳೆದ ಮೂರು ರ‍್ಷಗಳಿಂದಲೂ ಸಕ್ರಿಯವಾಗಿದೆ ಹೈದರಾಬಾದ್ ರ‍್ನಾಟಕ ನಾಗರೀಕರ ವೇದಿಕೆಯ ಈ ಕರ‍್ಯ ಅಭಿನಂದನೀಯ ಎಂದರು.
ರಾಜ್ಯ ಮಟ್ಟದ ಅಮೋಘರ‍್ಷ ನೃಪತುಂಗ ಪ್ರಶಸ್ತಿಯನ್ನು ಯಾದಗಿರಿಯ ಮಾಧ್ಯಮದ ಪ್ರತಿಭಾವಂತ ವಿಸ್ತಾರ ನ್ಯೂಸ್ ಚಾನೆಲ್ ನ ಜಿಲ್ಲಾ ವರದಿಗಾರ ನಾಗಪ್ಪ ಮಾಲಿಪಾಟೀಲ್ ಹಾಗೂ ಇತರ ರಂಗ ರ‍್ಮಿಗಳಿಗೆ ರಾಜ್ಯಮಟ್ಟದ ಅಮೋಘರ‍್ಷವದರ‍್ಗ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡುತ್ತಾ ಕಲ್ಯಾಣ ರ‍್ನಾಟಕದ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾದ ಹೆಸರಿದೆ ನೃಪತುಂಗನ ಪ್ರಭಾವ ಈ ಭಾಗದ ಕವಿಗಳ ಮತ್ತು ಸಾಹಿತ್ಯದ ಮೇಲಿದೆ ನೃಪತುಂಗನ ನಾಡಿನಲ್ಲಿ ನಿರಂತರವಾಗಿ ಸಾಹಿತ್ಯ ಸೇವೆಗಳು ನಡೆಯುತ್ತಿವೆ ಕನ್ನಡದ ತೇರನ್ನ ಹೆಗಲಿಗೆ ಹಗಲುಗೊಟ್ಟು ಸಾಹಿತಿ ಮಿತ್ರರು ನಡೆಯುತ್ತಿದ್ದಾರೆ ಇದು ಕನ್ನಡ ಭಾಷೆಗೆ ಒಳ್ಳೆಯ ಪೂರಕ ಬೆಳವಣಿಗೆ ಎಂದರು.
ಹೈದರಾಬಾದ್ ರ‍್ನಾಟಕ ನಾಗರಿಕದ ವೇದಿಕೆಯು ಮ್ಮಿಕೊಂಡ ಕಲ್ಯಾಣ ರ‍್ನಾಟಕ ಸಾಂಸ್ಕೃತಿಕ ಸಂಭ್ರಮದ ಎರಡನೇ ಸಮ್ಮೇಳನದ ಸ್ವರೂಪ ಹಾಗೂ ಕರ‍್ಯಕ್ರಮದ ಬಗ್ಗೆ ಮೆಚ್ಚುಗೆ ಇದ್ದು ನಿರಂತರವಾಗಿ ಈ ಸಂಸ್ಥೆ ಈ ರೀತಿಯ ಕರ‍್ಯಕ್ರಮಗಳನ್ನ ಕಲ್ಯಾಣ ರ‍್ನಾಟಕ ಪ್ರದೇಶದಲ್ಲಿ ನಡೆಸಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸಂಸ್ಥೆಗೆ ಪ್ರೋತ್ಸಾಹಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕರ್ಯಕ್ರಮದಲ್ಲಿ ಯಾದಗಿರಿಯ ನಾಟ್ಯ ಭಾರತಿ ನೃತ್ಯ ಶಾಲೆಯ ತಂಡದಿಂದ ಸಮೂಹ ಭರತನಾಟ್ಯ ಕಲಬರ‍್ಗಿಯ ಸಂಕಲ್ಪ ಮಾಲಿ ಪಾಟೀಲ್ ತಂಡದಿಂದ ಸಮೂಹ ನೃತ್ಯ. ವಿದ್ಯಾ ಮಂಗಳೂರು ಕೊಪ್ಪಳ ತ೦ಡದಿಂದ ನೃತ್ಯ ರೂಪಕ. ಸುಶೀಲಾ ಎಂಎಸ್ ಬೆಂಗಳೂರು ತಂಡದಿಂದ ಸಮೂಹನೃತ್ಯ. ಗುರುರಾಜ್ ಶಾಸ್ತ್ರಿ ರಾಯಚೂರು ತಂಡದಿಂದ ಭರತನಾಟ್ಯ ರೂಪಕ ಯಾದಗಿರಿಯ ಎಂ ಜೆ ಡ್ಯಾನ್ಸ್ ಗ್ರೂಪ್ ತಂಡದಿಂದ ಸಮೂಹ ನೃತ್ಯ ಹಾಗೂ ಇನ್ನಿತರ ಕಲಾತಂಡಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕರ್ಯಕ್ರಮದಲ್ಲಿ ಪ್ರರ‍್ಶನವನ್ನು ನಡೆದು ನಡೆದಿದ್ದ ಜನಮನವನ್ನ ರಂಜಿಸಿದವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇಂದ ಸಾಂಸ್ಕೃತಿಕ ನೃತ್ಯ ಕಲಾತಂಡಗಳನ್ನ ಕಲ್ಯಾಣ ರ‍್ನಾಟಕದ ಸಾಂಸ್ಕೃತಿಕ ಸಂಭ್ರಮದ ೨ನೇ ಸಮ್ಮೇಳನದ ಕರ‍್ಯಕ್ರಮಕ್ಕೆ ಪ್ರಾಯೋಜನೆಯನ್ನು ಮಾಡಲಾಗಿತ್ತು ಕರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕರ್ಯಕ್ರಮದ ನಿರುಪಣೆಯನ್ನು ಪಾಂಡವಪುರ ಮಂಜನಾಥ್ ನೆರವೇರಿಸಿದರು, ವೇದಿಕೆಯಲ್ಲಿ ಕೊಪ್ಪಳದ ರಥ ಶಿಲ್ಪಿ ಯಲ್ಲಪ್ಪ ಬಡಿಗೇರ್ ,ಮೇಘನಾಥ್ ಬೆಳ್ಳಿ ಚಿತ್ರಕಲಾವಿದರು ಶ್ರೀಮತಿ ನಿರೂಪ ಪಾಟೀಲ್. ಸಾಹಿತಿಗಳು ರಂಗರ‍್ಮಿಗಳಾದ ಶಂಕರ್ ಗುಗುರಿ. ಚನ್ನಬಸಪ್ಪ ಮಾಲಿ ಪಾಟೀಲ್. ರುದ್ರಗೌಡ ಹಂಗ್ಗನಹಳ್ಳಿ. ಸೋಮಶೇಖರ್ ನೀಲಿ,ಮಲ್ಲೇಶ್ ಕೋನಾಳ, ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಸಾಂಸ್ಕೃತಿಕ ಕರ‍್ಯರ‍್ಶಿ ಸಂಜೀವ ಕುಮಾರ್ ನಿರಂಜನ್ ಸ್ವಾಮಿ ವಂದಿಸಿದರು.