
ಪಟ್ಟಣ ಪಂಚಾಯಿತಿ ಸದಸ್ಯ ಮತ್ತು ರಂಗಭೂಮಿ ಕಲಾವಿದೆ ಕಳಕಪ್ಪ ತಳವಾರ ಅವರು ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,24- ರಂಗಭೂಮಿ ಕಲಾವಿದರು.ಗಾಯಕರು, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾದ ಕಳಕಪ್ಪ ತಳವಾರ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ರಂಗಭೂಮಿ ಕಲಾವಿದರಾಗಿ,ಗಾಯಕರಾಗಿ ಹಲವಾರು ನಾಟಕಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮನಮೋಹಕವಾಗಿ ಅಭಿನಯಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಂಚಿನ ಕಂಠದಿಂದ ಮ ನಸೂರೆಗೊಂಡಿದ್ದಾರೆ. ಅಲ್ಲದೇ ಜ್ಯೂನಿಯರ್ ಶಂಕರನಾಗ ಎಂದೇ ಖ್ಯಾತಿ ಪಡೆದಿರುವ ಕಳಕಪ್ಪ ತಳವಾರ,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಈಗ ಹಾಲಿ ಸದಸ್ಯರಾಗಿ ಕಾರ್ಯನಿರ್ವಹಿಸಿ, ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಇವರ ಕ್ರೀಯಾಶೀಲತೆಯನ್ನು ಗುರ್ತಿಸಿ ಧಾರವಾಡ ಜಿಲ್ಲೆಯ ಕುಂದಗೊಳದ ಚಿರಾಯು ಆಸೋಶಿಯೇಶನ್(ರಿ) ಕ ರ್ನಾಟಕ ಇವರು ಗಣರಾಜ್ಯೋತ್ಸವ ಅಂಗವಾಗಿ ಕೊಡಮಾಡುವ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಇದೇ ಜನೇವರಿ.28 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಪ್ರಶಸ್ತಿ ವಿತರಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಚಿರಾಯು ಅಸೋಶಿಯೇಶನ್(ರಿ) ಕರ್ನಾಟಕ ಅಧ್ಯಕ್ಷ ಡಾ.ಮಂಜುನಾಥ ಶಿವಕ್ಕನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.