
ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಅಮರೇಗೌಡ ಬಯ್ಯಾಪೂರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 28 ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಬಿ ಪಾಟೀಲ ಅವರು ಈ ಹಿಂದೆ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆ ಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಜೂನ್ 3ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲಿಸಬೇಕು ಎಂದು ಮಾಜಿ ಶಾಸಕ ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಈಶಾನ್ಯ ಪದವೀಧರರ ಚುನಾವಣೆ ಅಭ್ಯರ್ಥಿ ಪರ ಪ್ರಚಾರ ಮತ್ತು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರುಅವರು ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ 5 ಗ್ಯಾರಂಟಿ, ಯೋಜನೆಗಳನ್ನು ಜಾರಿಗೂಳಿಸಿ ಎಲ್ಲಾ ಸಮುದಾಯದವರ ಹಿತ ಕಾಪಾಡಿದೆ ಈ ಯೋಜನೆಯಗಳು ಬಡವರಿಗೆ ವರದಾನವಾಗಿವೆ ನಮ್ಮ ಸರಕಾರ ನುಡಿದಂತೆ ನಡೆದುಕೊಂಡು ಜನಪರ ಸರಕಾರ ವಾಗಿದೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಗೆಲುವು ಖಚಿತ ನಮ್ಮ ಪಕ್ಷದ ಮುಖಂಡರು ಕಾರ್ಯಕತ೯ರು ಒಂದಾಗಿ ಒಗಟ್ಟಿನಿಂದ ಅಭ್ಯರ್ಥಿ ಪರ ಪ್ರಮಾಣಿಕ ಕೆಲಸ ಮಾಡಿದ್ದಾರೆ ಅದೇ ರೀತಿ ಕನಾ೯ಟಕ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ನಮ್ಮ ಚಂದ್ರಶೇಖರ ಬಿ ಪಾಟೀಲ ಅವರು ಸಹ ಗೆಲುವು ಖಚಿತ ಎಂದರು ಮತ್ತು ನಮ್ಮ ರಾಜ್ಯ ಸರಕಾರ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ಹೆಚ್ಚಳ ಮಾಡಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಪದವೀಧರರ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆ ಹಾಗೂ ಶಿಕ್ಷಕರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಾಜಿ ಶಾಸಕರು ಹೇಳಿದರು .
ನಂತರ ಕಾರ್ಯಕ್ರಮ ಕುರಿತು ಮತ್ತು ಕಾಯ೯ಕತ೯ರನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು ಆಯ್ಕೆ ಯಾದರೆ ಸರಕಾರ ನಮ್ಮದೆ ಇರುತ್ತದೆ ಹೈದರಾಬಾದ್ ಕಲ್ಯಾಣ ಕರ್ನಾಟಕ ಭಾಗಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ವಾಗುತ್ತದೆ ಹೀಗಾಗಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ಅದಕ್ಕೆ ಎಲ್ಲಾ ಪದವೀಧರರಿಗೆ ನಮ್ಮ ಸರಕಾರ ಯೋಜನೆಗಳ.ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿ ಮತ್ತು ಹಾಕಿಸಬೇಕು ಮತ್ತು ನಮ್ಮ ಕ್ಷೇತ್ರದಲ್ಲಿ ಶಾಸಕ ಮುಖ್ಯಮಂತ್ರಿ ಆಥಿ೯ಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅತಿ ಹೆಚ್ಚು ಶಾಲಾ ಕಾಲೇಜು ಮಾಡಿ ಶಿಕ್ಷಣ ಗೋಸ್ಕರ ಹೆಚ್ಚು ಮಹತ್ವ ಕೊಟ್ಟು ಜನಪ್ರಿಯ ಶಾಸಕರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ,ಯುವ ಕಾಂಗ್ರೇಸ್ ಅಧ್ಯಕ್ಷ ಮಾಹಂತೇಶ ಗಾಣೀಗೇರ, ಬಿ,ಎಂ,ಶಿರೂರು ಎ,ಜಿ,ಭಾವಿಮನಿ
ಕೆರಿಬಸಪ್ಪ ನಿಡಗುಂದಿ. ಪಕ್ಷದ ವಕ್ತಾರ ಡಾ,ಶಿವನಗೌಡ ದಾನರಡ್ಡಿ,ಸುಧೀರ್ ಕೋರ್ಲಳ್ಳಿ ಶರಣಪ್ಪ ಗಾಂಜಿ. ರೇವಣಪ್ಪ ಸಂಗಟಿ,ಆನಂದ ಉಳ್ಳಾಗಡ್ಡಿ,ಸೇರಿದಂತೆ ಮತು ಇತರರು ಭಾಗವಹಿಸಿದ್ದರು.