ಕುಕನೂರ ೧೮ ರಂದು ಸುಗಮ ಸಂಗೀತ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕುಕನೂರು 17- ಪಟ್ಟಣದ ಕಲ್ಲೂರು ಕಲಾ ಸಾಂಸ್ಕೃತಿಕ ಕ್ರೀಡೆ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಕುಕನೂರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಯುಕ್ತ ಆಶ್ರಯದಲ್ಲಿ ನವಂಬರ್ 18ರಂದು ಶನಿವಾರ ದಿವಸ ಪಟ್ಟಣದ ಶ್ರೀ ಇಟಗಿ ಭೀಮಾಂಬಿಕ ದೇವಸ್ಥಾನದಲ್ಲಿ ಕಲಾವಿದರಾದ ಮುರಾರಿ ಭಜಂತ್ರಿ, ಹಾಗೂ ಮುಕುಂದ ಭಜಂತ್ರಿಯವರಿಂದಸುಗಮ ಸಂಗೀತ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಕುಕನೂರು ಅನ್ನದಾನೇಶ್ವರ ಶಾಖಾ ಮಠದ ಶ್ರೀಗಳಾದ ಮಹಾದೇವ ಮಹಾಸ್ವಾಮಿಗಳು, ಇಟಗಿ ಗ್ರಾಮದ ಶಿವಶರಣ ಗದಿಗೆಪ್ಪಜ್ಜನವರು, ಹಿರಿಯ ಪತ್ರಕರ್ತ ಕೊಟ್ರಪ್ಪ ಮುತ್ತಾಳ , ಹಿರಿಯ ಮುಖಂಡರಾದ ಬಸಲಿಂಗಪ್ಪ ಭೂತೆ, ಆರ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಸವರಾಜ ಗೌರಾ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಕುಕನೂರು ಕಾನಿಪ ಸಂಘದ ಅಧ್ಯಕ್ಷರಾದ ನಾಗರಾಜ ಬೇಣಕಲ್ ಸೇರಿದಂತೆ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಗಣ್ಯರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಮೌಲಹುಸೇನ್ ಎಫ್ ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!