IMG_20240622_162044

ಕುಷ್ಟಗಿ ವಕೀಲರ ಕಚೇರಿಗೆ ತೆರಳುವ ಆವರಣದಲ್ಲಿ ನೀರು ನಿಂತಿರುವುದು

ನ್ಯಾಯಾಲಯ ಆವರಣದಲ್ಲಿ ಚರಂಡಿ ನೀರು: ದುರ್ನಾಥಕ್ಕೆ ಬೇಸತ್ತ ವಕೀಲರು ಹಾಗೂ ಸಾರ್ವಜನಿಕರು

ಕುಷ್ಟಗಿ:ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಹೋಗುವ ದಾರಿಯಲ್ಲಿ ಮಳೆಯ ನೀರು ಮತ್ತು ಚರಂಡಿ ನೀರು ನಿಂತು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸಂಬಂಧಿಸಿದ ಇಲಾಖೆ ಹಾಗೂ ಅಭಿವೃದ್ಧಿ ಕಡೆ ಗಮನಹರಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ ಧೋರಣೆ ತೋರಿದ್ದಾರೆ ಎಂದು ವಕೀಲರು ದೂರಿದ್ದಾರೆ.

ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಹಿರಿಯ & ಕಿರಿಯ ಶ್ರೇಣಿ ನ್ಯಾಯಾಲಯಗಳು ಇದ್ದು ಪ್ರತಿನಿತ್ಯ ಕಚೇರಿಗೆ ಕೆಲಸದ ನಿಮಿತ್ಯ ನೂರಾರು ಜನ ವಕೀಲರು ಸೇರಿದಂತೆ ಸಾರ್ವಜನಿಕರು ಕಚೇರಿಗೆ ಬಂದೆ ಬರುತ್ತಾರೆ. ವಕೀಲರನ್ನು ಭೇಟಿಯಾಗಲು ಹೋಗಬೇಕೆಂದರೆ ಕಛೇರಿಯ ಮುಂಭಾಗದಲ್ಲಿ ನಿಂತಿರುವ ಮಳೆ ಮತ್ತು ಚರಂಡಿ‌ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಎದುರಿಸಬೇಕಾಗಿದೆ. ಅಲ್ಲದೇ ಆವರಣದಲ್ಲಿಯೇ ಇರುವ ಚರಂಡಿ ನೀರು ಸೋರಿಕೆಯಾಗಿದ್ದು ಇದರಿಂದ ದುರ್ನಾತ  ಬಿರುತ್ತಿದೆ. ನಿತ್ಯ ಮೂಗು ಮುಚ್ಚಿಕೊಂಡು ಮೂಕ್ಷಪ್ರೇಕ್ಷಕರಂತೆ ನಡೆದು ಹೋಗಬೇಕಾಗಿದೆ. ಇದರಿಂದಾಗಿ ವಕೀಲರು ಹಾಗೂ ನ್ಯಾಯಾಲಯಕ್ಕೆ ಬರುವ ಸಿಬ್ಬಂದಿಗಳು ತಿವ್ರ ತೊಂದರೆಯಾಗುತ್ತದೆ. ಈ ಬಗ್ಗೆ ನ್ಯಾಯ್ಯಾಂಗ ಇಲಾಖೆಯವರು  ಲೋಕೋಪಯೋಗಿ ಇಲಾಖೆಯವರಿಗೆ  ಲಿಖಿತವಾಗಿ ಪತ್ರ ಬರೆದಿದ್ದಾರೆ, ಆದರೆ ಲೋಕೋಪಯೋಗಿ ಇಲಾಖೆಯವರು ಈಗ ಅನುದಾನ ಯಾವುದು ಲಭ್ಯವಿರುವದಿಲ್ಲ ಎಂದು ಉತ್ತರ‌ ನೀಡಿದ್ದಾರೆ. ಸ್ವಚ್ಚತೆಗೆ ಪ್ರಮುಖ ಆಧ್ಯತೆ ಸಿಗಬೇಕಾದ ವಕೀಲರ ಕಚೇರಿ ಆವರಣ ದುರ್ನಾಥಕ್ಕೆ ಗುರಿಯಾಗಿ ಚರಂಡಿ ನೀರಿನ ಆಗರವಾಗಿದೆ ಎಂದು ಸಾರ್ವಜನಿಕರು ಹಾಗೂ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋಟ್:

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುದಾನ‌ ಬಿಡುಗಡೆಯಾದಲ್ಲಿ ಸದರಿ ಕಾಮಗಾರಿಗೆ ಚರಂಡಿಯನ್ನು ನಿರ್ಮಿಸಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮರಳಿ ನ್ಯಾಯಾಂಗ ಇಲಾಖೆಯವರಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಶಾಸಕರು ಈ ಬಗ್ಗೆ ಗಮನ ಹರಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕಿದೆ… 

ವಕೀಲರ ಸಂಘದ ಉಪಾಧ್ಯಕ್ಷ‌ ಶಿವಕುಮಾರ ದೊಡ್ಡಮನಿ

Leave a Reply

Your email address will not be published. Required fields are marked *

error: Content is protected !!