
ಕೃಷಿಕರಿಗೆ ಖುಷಿ ತಂದ ಮುಂಗಾರು ಮಳೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 4- ತಾಲೂಕಿನಲ್ಲಿ ಭಾನುವಾರ ರಾತ್ರಿ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಜೀವ ಕಳೆ ಬಂದಿದೆ ಹಳ್ಳ ಕೊಳ್ಳ ವೇದಾವತಿ ಹಗರಿ ನದಿ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದೆ.
ಈಗಾಗಲೇ ಹತ್ತಿ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ ರೈತರು ರಸ ಗೊಬ್ಬರವನ್ನು ಬೆಳೆಗೆ ನೀಡುತ್ತಿರುವುದು ಕಂಡು ಬಂತು ಬಿತ್ತನೆಗೆ ಭೂಮಿಯನ್ನು ಸಿದ್ಧಗೊಳಿಸಿದ ರೈತರಿಗೆ ಮಳೆಯು ವರದಾನವಾಗಿದೆ ಸಿರುಗುಪ್ಪ ತಾಲೂಕಿನ ಕರೂರು ದೊಡ್ಡ ಹಳ್ಳ ರಾರಾವಿ ಗ್ರಾಮದ ಯಲ್ಲಮ್ಮ ನ ಹಳ್ಳ ಹಗಲೂರು ಹೊಸಳ್ಳಿ ಹಿರೇ ಹಳ್ಳ ಹಾಗೂ ರಾರಾವಿ ಗ್ರಾಮದ ವೇದಾವತಿ ಹಗರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ ಇದರಿಂದ ದನ ಕರುಗಳಿಗೆ ಮತ್ತು ರೈತರಿಗೆ ತುಂಬಾ ಅನುಕೂಲವಾಗಿದೆ .
ಮಳೆ ವರದಿ : ಸಿರುಗುಪ್ಪ ತಾಲೂಕಿನಲ್ಲಿ ಸಿರುಗುಪ್ಪ-9.5 ಮಿಲಿಮೀಟರ್ ಮಳೆ , ತೆಕ್ಕಲಕೋಟೆ-36.8 ,ಸಿರಿಗೇರಿ- 19.3, ಮಣ್ಣೂರು ಸೂಗೂರು- 43.6, ಹಚ್ಚೋಳ್ಳಿ -16.2, ರಾವಿ ಹಾಳ್-10.4, ಕರೂರು -32.2, ಕೆ ಬೆಳಗಲ್ -75 ಮಿಲಿ ಮೀಟರ್ ಮಳೆಯಾಗಿದೆ ಒಟ್ಟು ಸಿರುಗುಪ್ಪ ತಾಲೂಕಿನಲ್ಲಿ ಸರಾಸರಿ 30.3 ಮಿಲಿ ಮೀಟರ್ ಮಳೆ ಸುರಿದಿದೆ ಗಡಿಭಾಗದ ವೇದಾವತಿ ನದಿ ಈ ವರ್ಷದ ಮೊದಲ ಬಾರಿಗೆ ತುಂಬಿ ಹರಿಯಿತು ವೇದಾವತಿ ನದಿ ತುಂಬಿದ್ದು ಕಂಡ ರೈತರು ಸಂತಸ ವ್ಯಕ್ತಪಡಿಸಿದರು .