
ಕೃಷಿ ಭೂಮಿಯಲ್ಲಿ ಪವರಗ್ರಿಡ್ ಭೂಸ್ವಾಧೀನ ಪ್ರಕ್ರಿಯೆ ರೈತರ ಆಕ್ರೋಶ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 26- ತಾಲೂಕಿನ ಲಕಮನಗುಳೆ. ಹಾಗೂ ವಣಗೇರಿ ಗ್ರಾಮದ ರೈತರ ಬಂಗಾರದಂತ ಕೃಷಿ ಭೂಮಿಯಲ್ಲಿ ಪವರಗ್ರಿಡ್ ಟ್ರಾನ್ಸಮೇಶನ್ ಲಿಮಿಟೆಡ ಕಂಪನಿಗೆ ನಾವು ಪ್ರಾಣ ಬಿಟ್ಟರು ಪರವಾಗಿಲ್ಲ ಆದರೆ ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ವಣಗೇರಿ ಗ್ರಾಮದ ರೈತ ಶಾಂತಯ್ಯ ಹಿರೇಮಠ ಹೇಳಿದರು.
ಕಳೆದ ಒಂದು ವಾರಗಳಿಂದ ಯಲಬುರ್ಗಾ ತಾಸಿಲ್ದಾರ್. ಹಾಗೂ ಪೊಲೀಸ್ ಇಲಾಖೆ ನಮ್ಮ ಮೇಲೆ ಬೆದರಿಕೆ ಹಾಕಿ ನೀವು ಭೂಮಿ ಹೇಗೆ ಕೊಡುವುದಿಲ್ಲ. ನಾವು ನೋಡುತ್ತೇವೆ ನಮ್ಮ ಒಪ್ಪಿಗೆ ಇಲ್ಲದಿದ್ದರೂ ನಮ್ಮ ಭೂಮಿಯನ್ನು ಸರ್ವೆ ಮಾಡುತ್ತಿದ್ದಾರೆ ತಾಲೂಕ ಆಡಳಿತ. ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಮಗೆ ದಿನವಿಡಿ ನಮಗೆ ಭೂಮಿ ಕೊಡುವಂತೆ ಒತ್ತಡ ಏರುತ್ತಿದ್ದಾರೆ ಜಿಲ್ಲಾ ಆಡಳಿತ ಈಗಾಗಲೇ 180 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯ ಮಾಡಲಾಗಿದ್ದು ಜಿಲ್ಲಾ ಆಡಳಿತ ನಮ್ಮ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಕಾರ್ಯವನ್ನು ಕೈಬಿಡಬೇಕು.
ತಾಲೂಕು ಆಡಳಿತ ಒಂದು ಎಕರೆ ಭೂಮಿ ಕೊಟ್ಟರೆ ನಿಮಗೆ 30 ಲಕ್ಷ ಕೊಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಇರುವುದೇ ಎರಡು ಮೂರು ಎಕರೆ ಈ ಭೂಮಿಯಲ್ಲಿ ಸೀಡ್ಸ್ ಬೆಳೆದು ವರ್ಷದಲ್ಲಿ 8.ರಿಂದ10 ಲಕ್ಷ ಆದಾಯ ಮಾಡುತ್ತೇವೆ ಇಂಥ ಭೂಮಿಯನ್ನು ಕಳೆದುಕೊಂಡರೆ ನಮ್ಮ ಗತಿ ಏನು ಇವಾಗ ಎಷ್ಟು ದುಡ್ಡು ಕೊಟ್ಟರು ಭೂಮಿ ಸಿಗುವುದಿಲ್ಲ ಇಂಥ ಪರಿಸ್ಥಿತಿಯಲ್ಲಿ ನಮ್ಮ ಭೂಮಿಯನ್ನು ದಬ್ಬಾಳಕ್ಕೆ ಮಾಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ್ದಾರೆ.
ನಮ್ಮ ಬಂಗಾರದಂತ ಜಮೀನಿಗೆ ಎಷ್ಟು ಲಕ್ಷ ಕೊಟ್ಟರು. ನಮ್ಮ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸುಲಭ ಎಂದು ಭಾವಿಸಬೇಡಿ. ಮಹಾತ್ಮ ಗಾಂಧಿ ನಡೆಸಿದ ದಂಡಿಯಾತ್ರೆಯಂತೆ ಅಹಿಂಸೆ ಹೋರಾಟ ಮಾಡುತ್ತೇವೆ. ನಮ್ಮ ಎದೆಗೆ ಗುಂಡು ಹೊಡೆದರು ಭೂಮಿ ಮಾತ್ರ ಬಿಟ್ಟು ಕೊಡುವುದಿಲ್ಲ ಎಂದು ದಿಟ್ಟತನದಿಂದ ವಣಗೇರಿ ಗ್ರಾಮದ ಮಹಿಳೆಯರು ಯಲಬುರ್ಗಾ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಭೂಮಿ ಬಿಟ್ಟು ಕೊಟ್ಟರೆ 180 ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ. ಗ್ರಾಮದಲ್ಲಿ ಮುಕ್ಕಾಲು ಭಾಗ ಜನರು ಭೂಮಿ ಕೊಡಲು ಅವರಿಗೆ ಸುಳ್ಳು ಭರವಸೆ ನೀಡಿ ಒಪ್ಪಿಸಿದ್ದಾರೆ ಸುಮಾರು 140 ರೈತರು ನಾವು ಭೂಮಿ ಕೊಡುವುದಕ್ಕೆ ಒಪ್ಪಿಲ್ಲ ಸರ್ಕಾರ ಏನಾದರೂ ದಬ್ಬಾಳಿಕೆ ಮಾಡಿ ಪಡೆದುಕೊಳ್ಳುವುದಕ್ಕೆ ಬಂದರೆ ನಾವು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ. ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಈ ಯೋಜನೆಯನ್ನು ಉಳುಮೆ ಮಾಡುವುದಕ್ಕೆ ಯೋಗ್ಯವಲ್ಲದ ಜಮೀನು ಹುಡುಕಿ ಆ ಪ್ರದೇಶದಲ್ಲಿ ನಿರ್ಮಿಸುವುದಕ್ಕೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಬೇಕು ತಾಲೂಕ ಆಡಳಿತ ರೈತರ ಮೇಲೆ ದೌರ್ಜನ್ಯ ಮಾಡಿ ನಿಮ್ಮ ಭೂಮಿಯನ್ನು ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ರೈತರೊಂದಿಗೆ ಅನುಚಿತವಾಗಿ ತಾಲೂಕ ಆಡಳಿತ ನಡೆದುಕೊಳ್ಳುತ್ತಿದೆ ರೈತರ ಭೂಮಿಯನ್ನು ಸ್ವಾದಿನ ಮಾಡಿಕೊಳ್ಳುತ್ತಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.