
ಕೆಡಿಪಿ ಸಭೆ : ಶಾಸಕ ರೆಡ್ಡಿಯಿಂದ ಅಧಿಕಾರಿಗಳ ತರಾಟೆಗೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 8- ನಗರದ ತಾಲೂಕ ಪಂಚಾಯತ್ ಮಂಥನ ಸಭಾಂಗಣದಲ್ಲಿ ನಡೆದ ಕೆಡಿಪಿ(ಪ್ರಗತಿ ಪರಿಶಿಲನಾಸಭೆ) ಅಧ್ಯಕ್ಷತೆವಹಿಸಿದ್ದ ಶಾಸಕ ಗಾಲಿ ಜನಾರ್ಧನರೆಡ್ಡಿ ವಿವಿಧ ಇಲಾಖೆ ಅಧಿಕಾರಿಗಳ ಮೆಲೆ ಹರಿಹಾಯ್ದರಲ್ಲದೇ ಕ್ರಮ ಜರುಗಿಸಲು ಸಭೆಯಲ್ಲಿ ಶಿಫಾರಸ್ಸು ಮಾಡಿದರು.
ಗಂಗಾವತಿ ಕ್ಷೆತ್ರದ ಜೆಜೆಎಂ ಕಾಮಗಾರಿ ೧೧೦ ಕೋಟಿ ಕೆಲಸಕ್ಕೆ ಮುಖ್ಯಮಂತ್ರಿ ಗಳೇ ಬಂದು ಉದ್ಘಾಟಿಸಿಬೇಕಾದ ಕಾಮಗಾರಿ ಗುತ್ತೆದಾರ ವಿರಯ್ಯಸ್ವಾಮಿ ಸಚಿವ,ಶಾಸಕರ ಗಮನ ತರದೆ ಅಧಿಕಾರಿಗಳಿಗೂ ಗೋತ್ತಿಲ್ಲದೇ ೨೫ ಕೋಟಿ ಕಾಮಗಾರಿ ಮುಗಿಸಿದ್ದನೆ ಅಂತಹ ಹೇಳುತ್ತಿದ್ದಾನೆ ತಕ್ಷಣವೇ ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಜನಾರ್ಧನರೆಡ್ಡಿ ತಿಳಿಸಿದರು.
ಆರ್.ಎನ್.ಶೆಟ್ಟಿ ಕಂಪನಿ ಉಪ ಕಾಲುವೆಗಳ ಕಾಮಗಾರಿ ಕೈಗೋಂಡು ಅವಧಿ ಮುಗಿದರೂ ಮುಂದೆ ಹಾಕುತ್ತಿದ್ದಾರೆ ರೈತರು ಒಂದು ಬೆಳೆ ತ್ಯಾಗ ಮಾಡಿದ್ದಾರೆ. ಈ ತಕ್ಷಣವೇ ನೀರಾವರಿ ಅಧಿಕಾರಿ ಗಳು ಕ್ರಮ ಜರುಗಿಸಲು ಮುಂದಾಗಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.
ಬಿಸಿ ಎಮ್ ಹಾಸ್ಟೆಲ್ ಗೆ ೩ಕೋಟಿ೨೬ಲಕ್ಷ ಮಂಜೂರಾಗಿ ೨ವರ್ಷವಾದರೂ ಕೆಆರ್ ಡಿಎಲ್ ಇಲಾಖೆ ಮುಗಿಸಿಲ್ಲ ಏನು ಅರ್ಥ,ಇಡಿ ರಾಜ್ಯದ ಲ್ಲಿಯೇ ಸರಕಾರಕ್ಕೆ ಕೆಆರ್.ಡಿಎಲ್ ಇಲಾಖೆ ತಲೆನೋವಾಗಿದೆ.
ಅಗಸ್ಟ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೋಳಿಸದಿದ್ದರೆ ಕ್ರಮ ಅನಿವಾರ್ಯ ವೆಂದು ಶಾಸಕರು ಹೇಳಿದರು.
ಸಮಾಜಕಲ್ಯಾಣ ಇಲಾಖೆಗೆ ಸರ್ವೆನಂ೫೩ರಲ್ಲಿ ೨೦ ಗುಂಟೆ ಜಾಗ ಮಂಜೂರಾಗಿದ್ದು ಖಾಸಗಿ ವ್ಯಕ್ಯಿಗಳು ೧೦ಗುಂಟೆ ಜಾಗ ಕಬಳಿಸಿದ್ದಾರೆ. ತಹಶಿಲದಾರ ಸರ್ವೆ ಇಲಾಖೆ ಕರೆದುಕೊಂಡು ಸ್ಥಳಕ್ಕೆ ಭೇಟಿ ನಿಡಬೇಕು ಎಂದರು.
ಸರ್ವೇ ಇಲಾಖೆ ಅಧಿಕಾರಿ ಉಡಾಫೆ ಉತ್ತರ ನಿಡಿದಾಗ ಶಾಸಕ ಗಾಲಿ ಜನಾರ್ಧನರೆಡ್ಡಿ ಸರಕಾರಕ್ಕೆ ತಿಳಿಸಿ ನಿಮ್ಮಂತಹ ಅಧಿಕಾರಿ ಯನ್ನು ಕೆಲಸದಿಂದಲೇ ವಜಾ ಗೊಳಿಸುವುದು ಸೂಕ್ತ ಎಂದು ತರಾಟೆಗೆ ತೆಗೆದುಕೊಂಡರು. ಅಬಕಾರಿ ಅಧಿಕಾರಿ ನಿಗಾವಹಿಸಿ ನಿವು ಏನು ಕೆಲಸ ಮಾಡುತ್ತಿದ್ದಿರಿ ಎಮ್.ಆರ್.ಪಿ ದರಕ್ಕಿಂತ ಮಧ್ಯ ಮಾರಾಟ ವಾಗುತ್ತಿದೆ. ಶಾಪ್ ಮಾಲಿಕರೋಂದಿಗೆ ಶಾಮಿಲ್ ಆಗಿದ್ದಿರಾ ಎಂದು ಶಾಸಕರು ತಿಳಿಸಿದರು.
ಕೆಡಿಪಿ ನಾಮನಿರ್ದೇಶನ ಸದಸ್ಯ ಭೀಮೇಶ ಮಾತನಾಡಿ ಅಬಕಾರಿ ಅಧಿಕಾರಿ ಗಳು ಅಂಗಡಿಯವರೋಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲವೊಂದು ಮುಖಂಡು ವಿನಾಕಾರಣ ಮಾಜಿ ಸಚಿವ ಇಕ್ಬಾಲ ಅನ್ಸಾರಿ ಯವರ ವಿರುದ್ದ ದೂರುತ್ತಿದ್ದರು. ಈಗ ಇಕ್ಬಾಲ್ ಅನ್ಸಾರಿ ಯವರು ಬಾರ್ ಗಳೆ ಇಲ್ಲ ಈಗ ಮುಖಂಡರು ಮೌನವಹಿಸಿ ಅಂಗಡಿ ಮಾಲಿಕರೋಂದಿಗೆ ಕೈಜೋಡಿಸಿದ್ದಾರೆ ಎಂದರು.
ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಪಕ್ಷಾತೀತವಾಗಿ ಕ್ರಮಕ್ಕೆ ತಿಳಿಸಿದ್ದನೆ ಎಂದರು.
ವಿವಿಧ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರ ಯು ನಾಗರಾಜ, ಕೋಪ್ಪಳ ತಹಶೀಲ್ದಾರ ವಿಠಲ ಚೌಗುಲೆ,ಗಂಗಾವತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಕೋಪ್ಪಳ ತಾಪಂ ಇಓ ದುಂಡಪ್ಪ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಉಪಸ್ಥಿತರಿದ್ದರು.