
ಕೃಷ್ಣಾ ನದಿ ನೀರಿನಿಂದ ಕೆರಗಳನ್ನು ತುಂಬಿಸಿದ ಸಂತಸ ನನ್ನಗಿದೆ ಮಾಜಿ ಸಚಿವ ಹಾಲಪ್ಪ ಆಚಾರ
ಯಲಬುರ್ಗಾ.3 – ಕ್ಷೇತ್ರದ ರೈತರ ಹಿತದೃಷ್ಟಿಯಿಂದ ನೀರಾವರಿ ಯೋಜನೆಯಗಾಗಿ ಹಗಲು ಇರುಳು ಶ್ರಮೀಸಿ ತಾಲೂಕಿನ ಕೆರೆಗಳಿಗೆ ಕೃಷ್ಣೆಯ ನೀರು ಕ್ಷೇತ್ರದಲ್ಲಿ ಅನೇಕ ಚಕ್ಕ ಡ್ಯಾಂ ಗಳು, ಬ್ರೀಜ್,ಕಮ್,ಬ್ಯಾರೇಜ್ ಗಳು ಮತ್ತು ಅನೇಕ ಕೆರೆಗಳ ಜಿರ್ಣೋದ್ದಾರ ಮಾಡಿದ್ದೇನೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಅವರು ತಾಲೂಕಿನ ತರಲಕಟ್ಟಿ ಗ್ರಾಮದ ಕೆರಗೆ ಕೃಷ್ಣ ನದಿಯ ನೀರು ಬಂದು ತುಂಬಿದ ಹಿನ್ನೆಲೆಯಲ್ಲಿ ರೈತರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೇಸ್ ನವರು ರೈತರಿಗೆ ಉಪಯೋಗವಾಗುವಂತಯಾವ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ತಾಲೂಕಿನ ಯಾವುದೇ ಕೆರೆಗಳ ಜೀರ್ಣೋದ್ಧಾರ ಮಾಡಲಿಲ್ಲ.
ಅನೇಕ ವರ್ಷಗಳ ಕಾಲ ರಾಜಕಾರಣ ಮಾಡಿದರು ಕೆರೆಗಳಿಗೆ ನೀರು ತರಲಾಗಲಿಲ್ಲ ನಿಮ್ಮ ಆಶೀರ್ವಾದದಿಂದ ನಾನು ಶಾಸಕನಾಗಿ ಮಂತ್ರಿಯಾಗಿ ತಾಲೂಕಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿ ನಾವೂ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಾಗಿ ಪ್ರತಿ ವರ್ಷ 10 ಸಾವೀರ ಕೋಟಿ ರೂಪಾಯಿ ನೀಡುವದಾಗಿ ಹೇಳಿದರು ,1 ರೂಪಾಯಿ ಸಹ ನೀಡಲಿಲ್ಲ,ಎಂದು ಕಾಂಗ್ರೇಸ್ ವಿರುದ್ಧ ವಾಘ್ದಾಳಿ ನಡಿಸಿದರು
ಕೃಷ್ಣಾ,ಬಿ,ಸ್ಕೀಂ,ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದಾಗ ನೀವು ಇದು ಅಡಿಗಲ್ಲು ಅಲ್ಲ ಅದು ಅಡ್ಡಗಲ್ಲು ಎಂದು ಹೇಳಿದವರು ಸತ್ಯ ಹರಿಶ್ಚಂದ್ರ ಬಂದರು ನೀರು ತರುವದಕ್ಕೆ ಆಗುವದಿಲ್ಲ ಎಂದು ಹೇಳಿದ್ದರು.
ನಾನು ಶಾಸಕನಾದ ಮೇಲೆ ಕೃಷ್ಣಯ ನೀರು ತಂದು ಭೂ ತಾಯಿಯ ಮಡಲಿಗೆ ಹಾಕಿ ತಾಲೂಕಿನ ಕೆರಗಳಿಗೆ ನೀರು ತುಂಬಿಸಿದ ತೃಪ್ತಿ ನನಗಿದೆ. ಕಾಂಗ್ರೇಸ್ ನವರ ಅಧಿಕಾರದ ಅವಧಿಯಲ್ಲಿ ತಾಲೂಕಿನ ಯಾವ ಕೆರೆಗಳು ಜೀರ್ಣೋದ್ಧಾರ ಮಾಡಲಿಲ್ಲ ಕಾಂಗ್ರೇಸ್ ನವರು ರೈತರಿಗೆ ಅನುಕೂಲ ವಾಗುವಂತ ಕೆಲಸ ಏನು ಮಾಡಲಿಲ್ಲ ಮತ್ತುನಿಮ್ಮ ಆಡಳಿತ ಅವಧಿಯಲ್ಲಿ ನೀರಾವರಿ ಏರಡನೆ ಹಂತದ ಕಾಮಗಾರಿಗೆ ಅನುಮೋದನೆ ಮಾಡಿಸಲಾಗಲಿಲ್ಲ ನಾನು ಶಾಸಕನಾದ ಮೇಲೆ ಕೊಪ್ಪಳ ಏತ ನೀರಾವರಿ.ಮತ್ತು ಕೆರ ತುಂಬಿಸುವ ಯೋಜನೆ.ಸಮ್ರಿಸ ಸರಕಾರದ ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿಯವರು ಇದ್ದಾಗ ಅವರನ್ನು ನಾನು ಬೇಟಿ ಮಾಡಿ 2ನೇ ಹಂತದ ಕಾಮಗಾರಿ ಅನುಮೋದನೆ ಕೂಡಿಸಿದ್ದೇನೆ ಮತ್ತು ಹಣ ಬಿಡುಗಡೆ ಮಾಡಸಿದಕ್ಕೆ ಕ್ಷೇತ್ರದ ಎಲ್ಲಾ ಕೆರಗಳಿಗೆ ನೀರು ತುಂಬಿಸಲು ಸಹಕಾರವಾಯಿತ್ತು ಎಂದರು
ಶಿವನಾಗಯ್ಯ ನಿಲೋಗಲ್ ಸಾನ್ನಿಧ್ಯ ವಹಿಸಿದರು,ಈ ಸಂದರ್ಭದಲ್ಲಿ ಮುಖಂಡರಾದ,RDCC.BANK ನಿರ್ದಶಕ ಬಸವರಾಜ ಗೌರಾ.ಬಸಲಿಂಗಪ್ಪ ಭೋತೆ ಅಮರೇಶ ಹುಬ್ಬಳ್ಳಿ ಹನುಮಂತಪ್ಪ ಹನಾಮಾಪೂರ. ಫಕೀರಪ್ಪ ತಳವಾರ ವೀರಣ್ಣ ಹುಬ್ಬಳ್ಳಿ ಶರಣಪ್ಪ ಹೂಸಕೇರ ಹನುಮಂತಪ್ಪ ಕನಕಗಿರಿ ಶಂಕರಪ್ಪ ಸುರಪುರ ಅಯ್ಯನಗೌಡ ಕೆಂಚಮ್ಮನವರು ಶ್ರೀನಿವಾಸ ತಿಮ್ಮಾಪೂರ ಶರಣಪ್ಪ ಬಣದಬಾವಿ.ಶಿವಪ್ಪ ವಾದಿ ಬಸವರಾಜ ರಾಜೂರು ಸೇರಿದಂತೆ ಮತ್ತು ಇತರರು ಭಾಗವಹಿಸಿದರು.