
ಮಳೆರಾಯ ಮಾಯಾ ರೈತರು ಪರದಾಟ
ಕರುನಾಡ ಬೆಳಗು ಸುದ್ದಿ
ರವಿಕುಮಾರ ಹಳ್ಳಿಕೇರಿ
ಕುಕನೂರ26-ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಮಳೆ ಇಲ್ಲದೇ ಒಣಗುತ್ತಿರುವ ಬೆಳೆಗೆ ; ಬೈಕ್ ಮೇಲೆ ನೀರು ತಂದು ನೀರು ಹಾಯಿಸುತ್ತಿರುವ ರೈತರು
ಮಳೆ ಇಲ್ಲದೇ ರಾಜ್ಯದಲ್ಲಿ ಬರಗಾಲ ಬಿದ್ದಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಿತ್ತಿದ ಬೆಳೆ ಕೈ ತಪ್ಪುವ ಕಾರಣದಿಂದ ರೈತರು ದೂರದ ಕೆರೆಯಿಂದ ಬೈಕ್ ನೀರಿನ ಮೊರೆ ಹೋಗಿದ್ದಾರೆ.
ಹೌದು, ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಭೀಕರ ಬರ ಬಿದ್ದಿದ್ದು, ರೈತರು ಬಿತ್ತಿದ ಅಲ್ಪ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆ ಇಲ್ಲದ ಕಾರಣ ಬೆಳೆ ಒಣಗುತ್ತಿದ್ದು, ರೈತರು ಬೆಳೆಗೆ ಕೆರೆಯಿಂದ ಎಕ್ಸೆಲ್ ಬೈಕ್ ಮೇಲೆ ನಾಲ್ಕು ಬಿಂದಿಗೆ ನೀರು ತಂದು ಹೊಲಕ್ಕೆ ಕೈಯಿಂದ ಹಾಯಿಸುತ್ತಿದ್ದಾರೆ. ಒಂದು ದಿನದ ಖರ್ಚು 9 ಸಾವಿರ ರೂಪಾಯಿಯಂತೆ ಕೊಟ್ಟು ಕೆರೆ ನೀರನ್ನು ಹೊಡೆಯಬೇಕೆಂದು. ಗ್ರಾಮದ ರೈತನಾದ ದೇವಪ್ಪ ಕೊರ್ಲಗುಂದಿ ಇವರು ಆಗ್ರಹಿಸಿದರು
ಮುಂಗಾರು ಹಂಗಾಮಿನ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಈಗ ಹಿಂಗಾರು ಹಂಗಾಮಿನ ಕೆಲವು ರೈತರು ಮಳೆ ಇಲ್ಲದೇ ಬಿತ್ತನೆ ಮಾಡಿದ. ಬೆಳೆಗೆ ಈಗಲೂ ಸಹ ಮಳೆಯಾಗಿಲ್ಲ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಆಗಾಗ ಅಲ್ಪ ಸ್ವಲ್ಪ ಈ ಹಿಂದೆ ಮಳೆಯಾಗಿದ್ದರಿಂದ ರೈತರು ಆಸೆಯಿಂದ ಬಿತ್ತನೆ ಮಾಡಿದ್ದಾರೆ. ಆದರೆ ಈ ಬೆಳೆಗೆ ಇಲ್ಲಿವರೆಗೂ ಮಳೆ ಆಗದೇ ಇರುವುದರಿಂದ ಈಗ ಬೆಳೆ ಉಳಿಸಿಕೊಳ್ಳಲು ನೀರಿನ ಅವಶ್ಯವಿದ್ದು. ಇದೇ ಕಾರಣಕ್ಕೆ ರೈತರು ಇದ್ದಬಿದ್ದ ಬೆಳೆಗಳಿಗೆ ಎಕ್ಸೆಲ್ ಬೈಕ್ ಮೇಲೆ ನಾಲ್ಕು ಬಿಂದಿಗೆ ನೀರು ತಂದು ಹೊಲಕ್ಕೆ ಹೊಡೆದು ಹರಸಾಹಸ ಪಡುತ್ತಿದ್ದಾರೆ.
ಯರೇಹಂಚಿನಾಳ ಭಾಗದಲ್ಲಿ ಕೆಲವು ರೈತರು ಬಿತ್ತನೆ ಮಾಡಿರುವ ಮೆಣಸಿನಕಾಯಿ ಹಾಗು ಈರುಳ್ಳಿ ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಪ್ರತಿ ಎಕರೆ ನೀರುಣಿಸಲು ಸರಿ ಸುಮಾರು 8 ಸಾವಿರ ರೂಪಾಯಿ ಅಂತೆ ಕೊಡ ಹೊತ್ತುಕೊಂಡು ಬರುವ ಕೂಲಿ ಕಾರ್ಮಿಕರಿಗೆ ಖರ್ಚು ಮಾಡುತ್ತಿದ್ದಾರೆ, ಎಂದು ಗ್ರಾಮದ ರೈತನಾದ ಬಸವರಾಜ ಹನಸಿ ಇವರು ಹೆಳಿದರು.
ಈಗಾಗಲೇ ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರಿಗೆ ಇರುವ ಬೆಳೆಯನ್ನು ಉಳಿಸಿಕೊಳ್ಳಬೇಕು. ಮುಂದೆ ಒಳ್ಳೆಯ ದರ ಸಿಕ್ಕರೆ ಸ್ವಲ್ಪ ಲಾಭವಾಗಬಹುದು ಎಂಬ ಆಸೆಯಿಂದ ಬೆಳೆ ಉಳಿಸಿಕೊಳ್ಳಲು ಬೆಳೆಗೆ ನೀರು ಹೊತ್ತಾಕಿ ಹರಸಹಾಸ ಪಡುತ್ತಿದ್ದಾರೆ. ಸರ್ಕಾರ ಬೆಳೆವಿಮೆ ಬಿಡುಗಡೆ ಮಾಡಿರಲಿಲ್ಲ ಸರ್ಕಾರ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಆದರೇ ರೈತರಿಗೆ ಪರಿಹಾರ ನೀಡಿಲ್ಲ ಸರ್ಕಾರ ಬರ ಪರಿಹಾರ ಬೆಳೆವಿಮೆ ನೀಡಿದ್ರೆ ಸ್ವಲ್ಪ ರೈತರಿಗೆ ಆಸರೆಯಾಗುತ್ತದೆ ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ದೇವರಾಜ ಮಡಿವಾಳರ,ಚಂದ್ರಶೇಖರ ಚಟ್ಟಿ, ಪತ್ರೇಪ್ಪ ರಾವಣಕಿ,ಶರಣಪ್ಪ ಮಡಿವಾಳ,ರಾಕೇಶ ಮಡಿವಾಳರ. ಇತರರಿದ್ದರು