ಅತಿಥಿ ಶಿಕ್ಷಕರ ನೇಮಕಾತಿ: ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೦3- ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ಕಿಹಳ್ಳಿಯ ಶ್ರೀಮತಿ ಇಂದಿರಾಗಾಂದಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಖಾಲಿ ಇರುವ ಗಣಿತ ವಿಷಯದ ಸಹ ಶಿಕ್ಷಕರ 01 ಹುದ್ದೆ ಮತ್ತು ಕಂಪ್ಯೂಟರ್ ಶಿಕ್ಷಣ 01 ಹುದ್ದೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗಣಿತ ವಿಷಯಕ್ಕೆ ಬಿ.ಎಸ್ಸಿ, ಬಿ.ಎಡ್(ಪಿಸಿಎಮ್) ಮತ್ತು ಟಿ.ಇ.ಟಿ ವಿದ್ಯಾರ್ಹತೆ ಕಡ್ಡಾಯ. ಕಂಪ್ಯೂಟರ್ ಶಿಕ್ಷಣಕ್ಕೆ ಬಿ.ಸಿ.ಎ/ಎಂ.ಸಿ.ಎ/ಎA.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನಿಗದಿತ ಹುದ್ದೆಗೆ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನವೆಂಬರ್ 06 ರೊಳಗೆ ವಸತಿ ಶಾಲೆಯ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವಸತಿ ಶಾಲೆ ಆದುದರಿಂದ ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನ.06 ಮಧ್ಯಾಹ್ನ 02:30 ಗಂಟೆಗೆ ನಡೆಯುವ ಮಾದರಿ ಬೋಧನೆಯೊಂದಿಗೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಇಂದಿರಾಗಾಂದಿ ವಸತಿ ಶಾಲೆ, ಕರ್ಕಿಹಳ್ಳಿ, (ಹಾಲಿ: ಗುಳಗಣ್ಣನವರ್ ಪಾಲಿಟೆಕ್ನಿಕ್ ಕಟ್ಟಡ, ದದೇಗಲ್ ತಾ.ಜಿ ಕೊಪ್ಪಳ-583237) ಪ್ರಾಚಾರ್ಯರ ಮೊ.ಸಂ: 8277587634 ಗೆ ಸಂಪರ್ಕಿಸಬಹುದು ಎಂದು ವಸತಿ ನಿಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.