
ಕೊಪ್ಪಳ ಐ ಆರ್ ಸಿ ಎಸ್.ಗೆ ಅತ್ಯತ್ತಮ ಜಿಲ್ಲಾ ಶಾಖೆ ಪ್ರಶಸ್ತಿ
ಕೊಪ್ಪಳ ಶಖೆಯಿಂದ ಐತಿಹಾಸಿಕ ಸಾಧನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 20 – ರಕ್ತಸಂಗ್ರಹಣೆಯಲ್ಲಿ 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ರಕ್ತದಾನ ಶಿಬಿರ ನಡೆಸಿರುವುದು ಹಾಗೂ ೧೦ ಸಾವಿರ ಯುನಿಟ್ ಸಂಗ್ರಹಣೆ ಮಾಡಿದ ಸಾಧನೆಗಾಗಿ ಅತ್ಯುತ್ತಮ ಜಿಲ್ಲಾ ಶಾಖೆ ಪ್ರಶಸ್ತಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ ಅವರು ಪ್ರದಾನ ಮಾಡಿದರು.
ಬೆಂಗಳೂರು ರಾಜಭವನದ ಗ್ಲಾಸ್ ಹೌಸ್ ನಲ್ಲಿ ಮಂಗಳವಾರ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಮತ್ತು ರೆಡ್ ಕ್ರಾಸ್ ಕೊಪ್ಪಳ ಶಾಖೆ ಅಧ್ಯಕ್ಷರಾದ ನಳಿನ್ ಅತುಲ್ ಹಾಗೂ ಚೇರಮನ್ ಸೋಮರಡ್ಡಿ ಅಳವಂಡಿ ಸ್ವೀಕಾರ ಮಾಡಿದರು.
ಉಪ ಸಭಾಪತಿಗಳಾದ ಡಾ:ಗವಿಸಿದ್ಧನಗೌಡ ಜಿ. ಪಾಟೀಲ್, ಪ್ರಧಾನ ಕಾರ್ಯದರ್ಶಿ ಡಾ:ಶ್ರೀನಿವಾಸ ಹ್ಯಾಟಿ, ನಿರ್ದೇಶಕರುಗಳಾದ ಡಾ:ಚಂದ್ರಶೇಖರರಡ್ಡಿ ಎಸ್. ಕರಮುಡಿ, ಡಾ:ಮಂಜುನಾಥ ಸಜ್ಜನ್, ರಾಜೇಶ ಯಾವಗಲ್, ಡಾ:ಶಿವನಗೌಡ ಪಾಟೀಲ್, ಡಾ:ರವಿಕುಮಾರ ದಾನಿ ರವರು ಭಾಗವಹಿಸಿದ್ದರು.
ಕೊಪ್ಪಳ ಭಾರತೀಯ ರೆಡ್ ಕ್ರಾಸ ಸಂಸ್ಥೆ ಸತತ ಐದು ವರ್ಷಗಳಿಂದ ರಾಜ್ಯ ಶಾಖೆ ನೀಡುವ ವಿವಿಧ ಪ್ರಶಸ್ತಿ ಗೆ ಭಾಜನವಾಗುತ್ತಿರುವುದು ಹೆಮ್ಮೆಯ ಸಂಗತಿ. ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷ ರು ಆಗಿರುವ ನಳಿನ್ ಅತುಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು , ಕೊಪ್ಪಳ ಜಿಲ್ಲೆಯಲ್ಲಿ ರಕ್ತ ಹೀನತೆ , ಅಪೌಷ್ಟಿಕತೆ ಬಹಳ ದೊಡ್ಡ ಪ್ರಮಾಣದಲ್ಲಿ ಇದೆ. ಇದನ್ನು ನಿಯಂತ್ರಣ ಮಾಡುವ ಅಗತ್ಯವಿದೆ. ಗರ್ಭಿಣಿ ಸ್ತ್ರೀಯರ ಎಚ್ ಬಿ ಪ್ರಮಾಣ ಅತ್ಯಂತ ಕಡಿಮೆ ಇರುವುದು ಬೇಸರದ ಸಂಗತಿ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಶಾಖೆಗೆ ಪ್ರಸಕ್ತ ಸಾಲಿಗೆ ಅತ್ಯುತ್ತಮ ಶಾಖೆ ಪ್ರಶಸ್ತಿ ಲಭಿಸಿರುವುದು ಖುಷಿಯಾಗಿದೆ. ಇದು ನಮ್ಮ ಜಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಡಾ. ಶ್ರೀನಿವಾಸ ಹ್ಯಾಟಿ ಪ್ರದಾನ ಕಾರ್ಯದರ್ಶಿ