
ಶಿಕ್ಷೆ ಪಡೆದು ಶಿಕ್ಷಣ ಪಡೆದದ್ದು ಸಾರ್ಥಕ — ಚಿದಾನಂದಪ್ಪ ಕಜ್ಜಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ. 29- ಶಿಕ್ಷಣ ದಿಂದ ಏನೇಲ್ಲಾ ಸಾಧಿಸಬಹುದು ಈ ಮೊದಲು ಗುರುಗಳು ನೀಡಿದ ಶಿಕ್ಷೆಯಿಂದ ಪಡೆದ ಶಿಕ್ಷಣ ಸಾಥಾರ್ಥಕವಾಗಿದೆ ಎಂದು ನಿ.ಮುಖ್ಯೊಪಾಧ್ಯಯ ಚಿದಾನಂದಪ್ಪ ಕಜ್ಜಿ ಹೇಳಿದರು
ತಾಲೂಕಿನ ಮುಧೋಳ ಗ್ರಾಮದಲ್ಲಿ 94—95 ನೇ ಸಾಲಿನ ಶ್ರೀತ್ರಿಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೀವನದಲ್ಲಿ ಆಶೆ ಇರಬೇಕೆ ಹೊರತು ದುರಾಶೆ ಇರಬಾರದು ಹಾಗೂ ನಮಗಿಂತ ಮೇಲಿನವರನ್ನು ನೋಡಿ ಜೀವನ ಸಾಗಿಸುವದಕ್ಕಿಂತ ಕೆಳಗಿನವರನ್ನು ನೋಡಿ ಸಂತೋಷ ಪಡಬೇಕು ಎಂದರು.
ನಿ.ಮುಖ್ಯೋಪಾಧ್ಯಾಯ ರಾಮನಗೌಡ ಬಾಳನಗೌಡ್ರ ಉದ್ಘಾಟಿಸಿದರು.
ಇಲಕಲ್ಲಿನ ಜಾನಪದ ಸಾಹಿತಿ ಫ್ರೊ. ಶಂಬು ಬಳಿಗಾರ ರವರು ದೇಶಿ ಸೊಗಡಿನ ವಿಷಯಗಳನ್ನು ಸೊಗಸಾಗಿ ವಿವರಿಸಿ ಜನ ಮೆಚ್ಚುಗೆಗೆ ಪಾತ್ರರಾದರು.
ವೀರಣ್ಣ ವಾಲಿ ˌ ಕೆ.ಜಿ.ತಳುವಗೇರಿˌ ಹನುಮಂತಪ್ಪ ವಡ್ಡರˌ ಎಂ.ಜಿ. ಪಲ್ಲೇದˌ ತಿಪ್ಪಣ್ಣ ಸಂದಿಮನಿˌಮಲ್ಲಿಕಾರ್ಜುನ ಕವಲೂರˌ ಬಾಳಪ್ಪ ಹೊಟ್ಟಿನˌ ಬಸಪ್ಪ ಹಗೇದಾಳ!ಶರಣಪ್ಪ ಇಟಗಿ ˌ ಹಾಗೂ ಇನ್ನೀತರರನ್ನು ಸನ್ಮಾನಿಸಲಾಯಿತು.
ವಿವಿಧ ಮನರಂಜನೆ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿದ್ದವು.ಮೆರವಣಿಗೆಯಲ್ಲಿ ಗುರುಗಳನ್ನು ವೇದಿಕೆಗೆ ಕರೆತಂದರು ಬಸವರಾಜ ತಮ್ಮಿನಾಳ ನಿರೂಪಿಸಿದರು . ಕಾಶಮ್ಮ ವಂದಿಸಿದರು.