ನಂ, ೮ ರಂದು ಆಯುರ್ವೇದ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೭- ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಸಂಹಿತಾ ಸಿದ್ಧಾಂತ ಮತ್ತು ಸಂಸ್ಕೃತ ವಿಭಾಗವು ಮೀಡಿಯಾ ಕಮಿಟಿಯ ಸಹಯೋಗದೊಂದಿಗೆ ಆಯುರ್ವೇದ ದಿನಾಚರಣೆಯನ್ನು ಆಯೋಜಿಸಿದೆ.
ಇದರ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನವೆಂಬರ್ 8 ಬುಧವಾರ ಮಧ್ಯಾಹ್ನ 3 ಗಂಟೆಗೆ ಧನ್ವಂತರಿಯ ಚಿತ್ರ ಬಿಡಿಸುವ ಸ್ಪರ್ಧೆ, 9ನೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಆಯುರ್ವೇದ ಘೋಷವಾಕ್ಯಸಹಿತ ದೀಪಾವಳಿಯ ಕುರಿತ ರಂಗೋಲಿ ಸ್ಪರ್ಧೆ, ಹಾಗೂ 10ನೇ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಔಷಧೀಯ ಸಸ್ಯ ಗುರುತಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಸರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ನವೆಂಬರ್ 7ರ ಸಂಜೆ 5 ಗಂಟೆಯ ಒಳಗಾಗಿ ದೂರವಾಣಿ ಸಂಖ್ಯೆ 9164309730 ಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಲ್ಲದೆ 10ನೇ ತಾರೀಕು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ “ಪ್ರತಿದಿನವೂ ಪ್ರತಿಯೊಬ್ಬರಿಗೂ ಆಯುರ್ವೇದ” ಎಂಬ ವಿಷಯದ ಮೆಲೆ ಆಅಯುರ್ವೇದ ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.