
ನಾಳೆ ಕೊಪ್ಪಳ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ – ಎ ವಿ ಕಣವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ನಗರದಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣದ ಭೂಮಿ ಪೂಜೆ ಸಮಾರಂಭ ನವೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿನ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ವಕೀಲರ ಹಾಗೂ ಸಾರ್ವಜನಿಕರ ಭಹುದಿನದ ಬೇಡಿಕೆ ಹಾಗೂ ಹೋರಾಟದ ಫಲವಾಗಿ ಕೋರ್ಟ ಕಟ್ಟದ ಭೂಮಿ ಪೂಜೆ ಜರುಗಲಿದೆ.
ಕಟ್ಟಡದಲ್ಲಿ 15 ಕೋಟ್ಟಡಿ ಗಳನ್ನು ಒಳಗೊಂಡಿದೆ ಸಂಪೂರ್ಣವಾಗಿ ಹವಾ ನಿಯಂತ್ರಣ ಹೊಂದಿದ್ದು. ನ್ಯಾಯಾಲಯ. ಕುಟುಂಬ ನ್ಯಾಯಾಲಯ ಸೇರಿದಂತೆ ಎಲ್ಲ ವಿಶೇಷ ನ್ಯಾಯಾಲಯ ಕಟ್ಟಡಗಳನ್ನು ಒಳಗೊಂಡಿದೆ.
ಭೂಮಿ ಪೂಜಾ ಕಾರ್ಯಕ್ರಮಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾ.ಪ್ರಸನ್ನ ಬಿ ವರಾಳೆ ಅವರು ಭೂಮಿಪೂಜೆ ನೆರವೇರಿಸುವರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ವಿ.ಶ್ರೀಶಾನಂದ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ಹಂಚಾಟೆ ಸಂಜೀವಕುಮಾರ, ಸಚಿವರಾದ ಹೆಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ, ಶರಣಗೌಡ ಬಯ್ಯಾಪುರ, ಉಚ್ಚ ನ್ಯಾಯಾಲಯದ ರಿಜಿಸ್ಟçರ್ ಜನರಲ್ ಕೆ.ಎಸ್.ಭರತಕುಮಾರ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್.
ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಶೇಖರ ಸಿ., ಕೊಪ್ಪಳ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಎ.ವಿ.ಕಣವಿ, ಜನರಲ್ ಸೆಕ್ರೇಟರಿ ಬಿ.ವಿ.ಸಜ್ಜನ್, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಹೇಮಂತರಾಜ್ ಹಾಗೂ ಬಾರ್ ಅಸೋಸಿಯೇಶನ್‌ದ ಎಕ್ಸೆಕ್ಯೂಟಿವ್ ಕಮೀಟಿ ಮೆಂರ‍್ಸ್ ಹಾಗೂ ಇನ್ನೀತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ಸಜ್ಜನ್. ಜಂಟಿ ಕಾರ್ಯದರ್ಶಿ ಎಸ್. ಹೆಚ್. ಹಿರೇಗೌಡ್ರ. ಸಿ.ಎಂ. ಪೋಲಿಸ್ ಪಾಟೀಲ್. ಬಿ. ಎಸ್ ವೀರಾಪೂರ ಇತರರು ಇದ್ದರು