
ಕೊಪ್ಪಳ ; ಬೆಳಂ ಬೆಳಿಗ್ಗೆ ಕಳ್ಳರ ಕೈಚಳಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 19- ನಗರದ ಟೀಚರ್ಸ್ ಕಾಲೋನಿಯಲ್ಲಿ ವಾಕಿಂಗ್ ಹೊರಟಿದ್ದ ಮಹಿಳೆಯ ಸರಗಳ್ಳತನ ಮಾಡಿ ಕಳ್ಳಪರಾರಿಯಾಗಿದ್ದಾನೆ.
ಬುಧವಾರ ಬೆಳಿಗ್ಗೆ ಈ ಘಟನೆ ಜರಗಿದ್ದು, ಮಂಜುಳಾ ಹಿರೇಮಠ ಅನ್ನೋರ ಕತ್ತಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಕಳ್ಳರು
ನಗರದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ ಹೆಚ್ಚಾಗಿದ್ದು , ಒಂಟಿಯಾಗಿ ಇರೋ ಮಹಿಳೆಯರನ್ನು ಟಾರ್ಗೇಟ್ ಮಾಡಿ ಸರಗಳ್ಳತನ ಮಾಡುವ ಘಟನೆಗಳು ಹೆಚ್ಚಾಗಿವೆ,
ಕೊಪ್ಪಳ ನಗರದ ಟೀಚರ್ಸ್ ಕಾಲೋನಿಯಲ್ಲಿ ಇಂದು ಮತ್ತೊಂದು ಸರಗಳ್ಳತನ ಜರುಗಿದ್ದು ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದು ಸರಗಳ್ಳತನ ಮಾಡಿಕೊಂಡ ಪರಾರಿಯಾಗಿದ್ದಾರೆ.
ಮಂಜುಳಾ ಹಿರೇಮಠ ಅನ್ನೋರ ಕತ್ತಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ, ಐವತ್ತು ಗ್ರಾಮನ ಚಿನ್ನದ ಮಾಂಗಲ್ಯ ಸರ ಮನೆ ಮುಂದೆ ನಿಂತಿದ್ದರು ಎನ್ನಲಾಗಿದೆ.
ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.