IMG-20231106-WA0014

ಕ್ರೀಡೆ ಜೀವನದ ಅವಿಭಾಜ್ಯ ಅಂಗ :ನಾಗರಾಜ ಬೆನಕಲ್

ಕರುನಾಡ ಬೆಳಗು ಸುದ್ದಿ
ಕುಕನೂರ 06-ಪಟ್ಟಣದ ದ್ಯಾಂಪೂರ ಗ್ರಾಮದ ವಿರುಪಾಕ್ಷಪ್ಪ ಪಲ್ಲೇದ ಇವರ ಜಾಗದಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಭಗತ್ ಸಿಂಗ್ ಯುಥ್ ಕ್ಲಬ್ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರಿರುವುದರ ಮೂಲಕ ಚಾಲನೆಯನ್ನು ನೀಡಲಾಯಿತು.

ಈಸಂದರ್ಭದಲ್ಲಿ ಮಾತನಾಡಿದ ಕುಕನೂರು ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್ ಬೆನಕಲ್ ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಮನುಷ್ಯನು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕ್ರೀಡೆಯು ಅತ್ಯವಶ್ಯಕವಾಗಿದ್ದು ಕ್ರೀಡೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದರ ಮೂಲಕ ಕ್ರೀಡಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು. ಕ್ರೀಡೆಯು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯವಶ್ಯಕವಾಗಿದ್ದು ಕ್ರೀಡೆ ಇಲ್ಲದವನ ಬಾಳು ಕೀಡೆ ತಿಂದ ಹಣ್ಣಿನಂತಾಗುತ್ತದೆ ಎಂದು ಮಾತನಾಡಿದರು.

ಕುಕುನೂರು ಪಟ್ಟಣದ ಶ್ರೀ ಅನ್ನದಾನೇಶ್ವರ ಶಾಖಾಮಠದ ಮಹದೇವಯ್ಯ ಮಹಾಸ್ವಾಮಿಗಳು ಮಾತನಾಡಿ ಕ್ರೀಡೆ ಮನುಷ್ಯನಿಗೆ ಅತ್ಯಮೂಲ್ಯವಾಗಿದೆ ಆರೋಗ್ಯ ಮತ್ತು ಸ್ವಾಸ್ಥತೆಯನ್ನು ಕಾಪಾಡಿಕೊಳ್ಳುವಲ್ಲಿ ಕ್ರೀಡೆಯು ಅತ್ಯಂತ ಯಶಸ್ವಿಯಾಗಿದೆ ಕ್ರೀಡೆಯಲ್ಲಿ ಪಾಲ್ಗೊಂಡು ಸದೃಢ ದೇಹ ಮತ್ತು ಸದೃಢ ಮನಸ್ಸನ್ನು ಹೊಂದಿಕೊಂಡಾಗ ಆರೋಗ್ಯದಿಂದಿರಲು ಸಾಧ್ಯ ಎಂದು ಮಾತನಾಡಿದರು.

ಗ್ರಾಮದ ಯುವಕರಾದ ರವಿಚಂದ್ರ ಶಿಂದೆ ಮಾತನಾಡಿ, ಬಾಲ್ಯದಿಂದಲೂ ಕ್ರೀಡೆಗಳನ್ನು ನೋಡುತ್ತಾ ಬರುವುದಾದರೆ ಗ್ರಾಮದಲ್ಲಿ ಕ್ರೀಡೆಯನ್ನು ಆಯೋಜಿಸಬೇಕೆಂದು 5 ,10 ವರ್ಷಗಳಿಂದ ಪ್ರಯತ್ನಪಟ್ಟರು ಸಾಧ್ಯವಾಗದೇ ಇರುವುದರಿಂದ ಈಗ ಭಗತ್ ಸಿಂಗ್ ಯುತ್ ಕ್ಲಬ್ ಅವರು ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದು ತುಂಬಾ ಸಂತೋಷವೆನಿಸುತ್ತದೆ. ಈ ಹಿಂದೆ ನಮ್ಮ ತಾಲೂಕಿನ ಶಾಸಕರಾದ ಈಶಣ್ಣ ಗುಲಗನ್ನ ನವರ್ ನಮ್ಮ ಗ್ರಾಮಕ್ಕಾಗಿ ಒಂದು ಗರಡಿಮನಿ ಅಥವಾ ಜಿಮ್. ನಿರ್ಮಿಸಿ ಕೊಡಿ ಎಂದಾಗ ಸರ್ಕಾರದ ವತಿಯಿಂದ 5 ಲಕ್ಷ ಹಣ ಮಂಜೂರಾಗಿತ್ತು. ಸ್ಥಳದ ಅಭಾವದಿಂದ ಅದು ನೆರವೇರಲಿಲ್ಲ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆಯತ್ತ ಒಲವು ತೋರಬೇಕು ಎಂದು ಮಾತನಾಡಿದರು.

ಶಾಲಾ ಮುಖೋಪಾಧ್ಯಾಯರಾದ ಅಬ್ದುಲ್ ಖಾದರ್ ಮಾತನಾಡಿ,ಯುವಕರು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡೆಯಲ್ಲಿ ನಿರ್ಣಾಯಕರ ಅಂತಿಮ ತೀರ್ಪಿಗೆ ತಲಬಾಗಿ ನಡೆದು ಕ್ರೀಡೆಯನ್ನ ಯಶಸ್ವಿಗೊಳಿಸಬೇಕೆಂದು ಮಾತನಾಡಿದರು.

ವಕೀಲಾರದ ಜಗದೀಶ್ ತೊಂಡಿಹಾಳ ಮಾತನಾಡುತ್ತಾ ಕ್ರೀಡೆಗಳಿಂದ ಮನುಷ್ಯನ ಅಂಗಾಂಗಗಳು ಬಲಿಷ್ಠಗೊಳ್ಳುವುದಲ್ಲದೆ ಕ್ರೀಡೆಗಳಿಂದ ಪ್ರತಿಯೊಬ್ಬರಿಗೂ ನವಚೇತನ್ಯ ಉಂಟಾಗೋದಲ್ಲದೆ ವಿದ್ಯಾರ್ಥಿಗಳಿಗೆ ಕ್ರೀಡೆಗಳಿಂದ ಮುಂದಿನ ದಿನಮಾನಗಳಲ್ಲಿ ಸರಕಾರದಿಂದ ಸಿಗುವಂತಹ ಸೌಲಭ್ಯಗಳು ಸಿಗುವ ಸಂಭವ ಹೆಚ್ಚು ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ದುಶ್ಚಟಗಳನ್ನು ತ್ಯಜಿಸಿ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಸದೃಢ ದೇಹ ಹೊಂದಿಕೊಳ್ಳಬೇಕು ಎಂದು ಮಾತನಾಡಿದರು.
ಪ್ರಥಮ ಬಹುಮಾನ 10.001 ಮತ್ತು ಕಪ್, ದ್ವಿತೀಯ ಬಹುಮಾನ 5001 ಮತ್ತು ಕಪ್. ತೃತೀಯ ಬಹುಮಾನ 3001 ಮತ್ತು ಕಪ್. ಪಂದ್ಯಾವಳಿಯಲ್ಲಿ ಬಹುಮಾನವನ್ನು ವಿತರಿಸಲಾಗುತ್ತದೆ ಎಂದು ಪ್ರೇಮರಾಜ ಮಲಗಿತ್ತಿ ತಿಳಿಸಿದರು.

ಈ ಸಂದರ್ಭದಲ್ಲಿದೇವಪ್ಪ ಮರಡಿ, ಶಿವು ರಾಜೂರ, ವಿಜಯ್ ಮಾದುನೂರು, ಲಕ್ಷ್ಮಣ್ ಕಾಳೆ, ರಾಜಶೇಖರ್, ವಿನಾಯಕ್ ಸರಗಣಾಚಾರ, ಕನಕಪ್ಪ ಯಡೆಯಾಪುರ್, ಬಸವರಾಜ್ ಹಾಳಕೇರಿ, ರಾಮನಗೌಡ, ರಾಘು ಕಲ್ಮನಿ ,ದೇವೇಂದ್ರಪ್ಪ, ಪ್ರೇಮರಾಜ ಮಾಲಗಿತ್ತಿ ,ಭಗತ್ ಸಿಂಗ್ ಯುತ್ತ ಕ್ಲಬ್ ಪದಾಧಿಕಾರಿಗಳು, ಹಾಗೂ ಗ್ರಾಮದ ಗುರು ಹಿರಿಯರು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!