
ಯುವಕನ ಮೃತದೇಹ ಪತ್ತೆ
ಕೊಪ್ಪಳ, ೧೮- ನಗರದ ಸಮೀಪದ ಮಳೆಮಲ್ಲೇಶ್ವರ ದೇವಸ್ಥಾನದ ಬಳಿ ಯುವಕನ ಮೃತದೇಹ ಪತ್ತೆ ಯಾಗಿದೆ.
ಸೋಮವಾರ ಸಂಜೆ ಕೊಪ್ಪಳ ನಗರದ ಮಳೆ ಮಲ್ಲೇಶ್ವರ ದೇವಸ್ಥಾನದ ಬಳಿ ಅನುಮಾನಗಳಿಗೆ ಕಾರಣವಾಗಿರುವ ಮೃತ ದೇಹ ಪತ್ತೆಯಾಗಿದ್ದು
ಮೃತ ಯುವಕ ಅಳವಂಡಿ ಗ್ರಾಮದ ವರೇಂದು ಶಂಕಿಸಲಾಗಿತ್ತು ಆದರೆ ಖಚಿತ ವಾಗಿಲ್ಲಾ.
ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯ ವಿಧಿವಿಜ್ಞಾನ ಕೇಂದ್ರಕ್ಕೆ ಮೃತ ದೇಹ ರವಾನೆ ಮಾಡಲಾಗಿದ್ದು ಸ್ಥಳಕ್ಕೆ ನಗರ ಠಾಣಾ ಪೋಲಿಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು. ಸೋಮವಾರ ರಾತ್ರಿವರೆಗೆ ಮೂತದೇಹ ಗುರುತು ಸಿಗದ ಹಿನ್ನೆಲೆಯಲ್ಲಿ ದೂರು ದಾಖಲಾಗಿರಲಿಲ್ಲ ಪೋಲಿಸರು ತನಿಕೆ ಮುಂದುವರೆಸಿದ್ದಾರೆ.