WhatsApp Image 2024-03-20 at 2.37.33 PM

ಕೊಪ್ಪಳ : ರಾಜಶೇಖರ ಹಿಟ್ನಾಳ್ ಗೆ ಕಾಂಗ್ರೆಸ್ ಟಿಕೆಟ್

ಕರುನಾಡಬೆಳಗು ಸುದ್ದಿ

ಸಿರುಗುಪ್ಪ,20- ಕೊಪ್ಪಳ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ಅಂತಿಮಗೊಂಡಿದ್ದು ಕೊಪ್ಪಳ ಕ್ಷೇತ್ರದ ಟಿಕೆಟ್ ಬಹುತೇಕ ರಾಜಶೇಖರ ಹಿಟ್ನಾಳ್ ಗೆ ಎನ್ನಲಾಗುತ್ತಿದೆ.

ಎರಡು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ರಾಜಶೇಖರ ಹಿಟ್ನಾಳ್ ಅವರು ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು 36 ಸಾವಿರ ಮತಗಳ ಅಂತರದಿಂದ ಪರಭವ ಗೊಂಡಿದ್ದು ಈ ಬಾರಿಯೂ ಟಿಕೆಟಿಗೆ ಫೈಟ್ ನಡೆಸಿದ್ದರು ಸಂಭಾವ್ಯ ಪಟ್ಟಿಯಲ್ಲಿ ಕೊಪ್ಪಳಕ್ಕೆ ರಾಜಶೇಖರ ಹಿಟ್ನಾಳ್ ಹೆಸರು ಅಂತಿಮಗೊಂಡಿದೆ ಎನ್ನಲಾಗಿದೆ ಮತ್ತೊಂದೆಡೆ ರಾಜಶೇಖರ ಹಿಟ್ನಾಳ್ ಅವರು ಕನಕಗಿರಿ ಕ್ಷೇತ್ರದಲ್ಲಿ ಕಾರ್ಯಕರ್ತರ ಭೇಟಿ ನಡೆಸಿ ಬೆಂಬಲ ಕೋರಿದ್ದು ಟಿಕೆಟ್ ಪಕ್ಕ ಎಂಬ ಸಂದೇಶ ರವಾನಿಸಿದ್ದಾರೆ.

ಬಿ ಎ ಪದವೀಧರ ಆಗಿರುವ ರಾಜಶೇಖರ ಹಿಟ್ನಾಳ್ ರಾಜಕೀಯ ಕುಟುಂಬ ಹಿನ್ನೆಲೆ ಹೊಂದಿದ್ದಾರೆ ಇವರ ತಂದೆ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಸಹೋದರ ರಾಘವೇಂದ್ರ ಹಿಟ್ನಾಳ ಮೂರನೇ ಅವಧಿಗೆ ಕೊಪ್ಪಳ ಶಾಸಕರಾಗಿ ಮುಂದುವರೆದಿದ್ದಾರೆ.

ರಾಜಶೇಖರ ಹಿಟ್ನಾಳ್ ಎರಡು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ನಡೆಸಿದ್ದರು ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಕೊಪ್ಪಳ ರಾಜಕಾರಣದಲ್ಲೇ ಮುಂದುವರೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಕಾಂಗ್ರೆಸ್ ಟಿಕೇಟಿಗೆ ಪೈಪೋಟಿ ಹೆಚ್ಚಿದೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸಿಂಧನೂರಿನ ಬಾ ದರ್ಲಿ ಬಸವನಗೌಡ ಕೊಪ್ಪಳ ಕ್ಷೇತ್ರದ ಟಿಕೆಟ್ ರೇಸ್ ನಲ್ಲಿದ್ದಾರೆ.

ವಿವಿಧ ಕಾರಣಗಳಿಗೆ ಪಟ್ಟಿ ಅಂತಿಮ ಗೊಳ್ಳುವುದು ಮುಂದೂಡಲ್ಪಟ್ಟಿತ್ತು ಇತ್ತೀಚಿಗೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ಕೊಪ್ಪಳ ಕ್ಷೇತ್ರದ ಹಾಲಿ ಸಂಸದ್ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಮಿಸ್ ಆಗಿದೆ ಅನೇಕ ನಾಯಕರು ಕರಡಿ ಸಂಗಣ್ಣ ಅವರನ್ನು ಸಂಪರ್ಕಿಸಿದ್ದು ಒಂದು ಹಂತದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಕ್ಕರು ಅಚ್ಚರಿ ಇಲ್ಲ ಎಂಬ ಚರ್ಚೆಗಳು ಶುರುವಾಗಿವೆ ಈ ನಡುವೆ ಕಾಂಗ್ರೆಸ್ ನಾಯಕರುನಡೆಸಿದ ಸಭೆಯಲ್ಲಿ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!