
ಸಾಲದ ಬಾದೆ ರೈತ ಕೃಷ್ಣಪ್ಪ ರಾಠೋಡ(54) ಆತ್ಮಹತ್ಯೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,26- ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಗ್ರಾಮದ ಕೆ.ಬೋದೂರು ತಾಂಡಾದ ರೈತ ಕೃಷ್ಣಪ್ಪ ರಾಠೋಡ(54) ಬೆಳೆ ಸಾಲ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾರೂಣ ಘಟನೆ ಜರುಗಿದೆ.
ಇಲಕಲ್ ನ ಎಕ್ಸೆಸ್ ಬ್ಯಾಂಕಿನಲ್ಲಿ ನಾಲ್ಕು ಲಕ್ಷ ಸಾಲ ಮಾಡಿದ್ದ ರೈತ.ಹೊಲದಲ್ಲಿ ಕೊಳವೆ ಬಾವಿ ಹಾಗೂ ಸಾಗುವಳಿ ಮಾಡಲು ಸಾಲ ಮಾಡಿದ ಎನ್ನಲಾಗಿದೆ.
ಸಾಲ ತೀರಿಸಲು ಆಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದ್ದಾನೆಂದು ಶಂಕಿಸಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು ಪರಿಶೀಲನೆ ಮಾಡಿದ್ದು ಕುಟುಂಬ ಸದಸ್ಯರ ದೂರಿನ ಮೇಲೆ ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.