
ಗಂಗಾವತಿ : ಕವಿ ಕಾವ್ಯ ಸಂವಾದ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಕವಿ ವಿಶಾಲ ಮ್ಯಾಸರ್ ಅವರೊಂದಿಗೆ ಕವಿ-ಕಾವ್ಯ-ಸಂವಾದ ಕಾರ್ಯಕ್ರಮವು ಜುಲೈ 09ರಂದು ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಮುಮ್ತಾಜ್ ಬೇಗಂ ಅವರು ಅಧ್ಯಕ್ಷತೆ ವಹಿಸುವರು. ಕವಿ-ಕಾವ್ಯ-ಸಂವಾದ ಕಾರ್ಯಕ್ರಮದ ಸಂಚಾಲಕರಾದ ಗುಂಡೂರು ಪವನ್ ಕುಮಾರ ಅವರು ಪ್ರಾಸ್ತಾವಿಕ ಮಾತನಾಡುವರು.
ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಡಾ.ಬಸವರಾಜ ಗೌಡನಬಾವಿ ಹಾಗೂ ಡಾ.ಪಾಗುಂಡಪ್ಪ ಅವರು ಉಪಸ್ಥಿತರಿರುವರು.
ಸ್ನಾತಕೋತ್ತರ ಕನ್ನಡ ವಿಭಾಗದ ನಾಲ್ಕನೆಯ ಸೆಮಿಸ್ಟರ್ ವಿದ್ಯಾರ್ಥಿ ಪ್ರಶಾಂತ ಅವರು “ಬಟ್ಟೆಗಂಟಿದ ಬೆಂಕಿ” ಕೃತಿ ಕುರಿತು ಮಾತನಾಡುವರು. ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.