IMG_20231025_161304

ಕರಕುಶಲ ಮತ್ತು ನೇಯ್ಗೆ ಮೇಳಕ್ಕೆ ಸಂಸದ ಕರಡಿ ಚಾಲನೆ

ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ಕಲ್ಪಿಸುವುದು ಪ್ರಧಾನಿ ಮೋದಿ ಕನಸು

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೪- ಮಣ್ಣಿನ ಮಡಿಕೆ. ಮೇದಾರ ಬಿದಿರಿನ ವಸ್ತುಗಳು ಸೇರಿದಂತೆ ಇತರ ಗುಡಿ ಕೈಗಾರಿಕೆಗಳಿಗೆ ಆಧುನಿಕ ಸ್ಪರ್ಶನೀಡಿ ಮಾರುಕಟ್ಟೆ ಕಲ್ಪಿಸುವ ಕೆಲಸ ಪ್ರಧಾನಿ ಅವರ ಕನಸು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ತಾಲೂಕ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಮಂಗಳೂರು- ಕರ್ನಾಟಕ ಕರಕುಶಲ ಹಸ್ತಕಲಾ ಸೇವಾ ಕೇಂದ್ರದಿAದ ನೇಯ್ಗೆ ಮಹೋತ್ಸವ ಕಿರು ಪ್ರದರ್ಶನ ಮತ್ತು ಮಾರಾಟ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿ ಮಾತನಾಡಿದರು.
ಗಾಂಧಿ ಕನಸಿನಂತೆ ಗುಡಿ ಕೈಗಾರಿಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮೂಲಕ ವಿಶ್ವಕರ್ಮ ಯೋಜನೆ ಮೇದಾರ, ಬಡಿಗೆ, ಗೊಂಬೆ, ಸೇರಿದಂತೆ ಅನೇಕ ಕೆಲಸಗಾರರಿಗೆ ಒಂದು ಲಕ್ಷದ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಈ ಪ್ರದರ್ಶನದಲ್ಲಿ ಕೊಪ್ಪಳದ ಮೇದಾರ ಹಾಗೂ ಕಿನ್ನಾಳ ಸೇರಿದಂತೆ ವಿವಿಧ ಸಂಸ್ಥೆಯ ೨೫ ಕಲಾ ಸಂಸ್ಥೆಗಳು ಕಲಾ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನೆಗೊಂಡವು.
ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಮಾತನಾಡಿ, ಸ್ವ ಉದ್ಯೋಗ ಮಹಿಳೆಯರ ಶಕ್ತಿ. ಬೀಸಣಕೆ, ಮರದ ತೊಗಟೆಯಿಂದ ಆಧುನಿಕ ಕ್ಲಿಪ್, ಮಣ್ಣಿನ ಆಭರಣ, ಟೆರೆಕೋಟ ಆಕರ್ಷಕ ಜನಮೆಚ್ಚುಗೆ ಗಳಿಸುತ್ತಿವೆ ಅಂತಹ ವಸ್ತು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ ಮೋದಿಯವರ ಕನಸು ನನಸಾಗುತ್ತಿದೆ, ದೇಶಿ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವ ಮೂಲಕ ಹೆಚ್ಚೆಚ್ಚು ಬೇಡಿಕೆ ಬರುತ್ತಿದೆ.
ಕಿನ್ನಾಳ ಕಲೆ ಪ್ರಸಿದ್ದಿ ನಮ್ಮ ಹೆಮ್ಮೆಯ ವಿಷಯ. ದೇಶ ವಿದೇಶಗಳ ಮಾರುಕಟ್ಟೆ ಕಲ್ಫಿಸುವುದು ಸರ್ಕಾರದ ಜವಾಬ್ದಾರಿ ಕೇಂದ್ರದದAತೆ ರಾಜ್ಯ ಸರ್ಕಾರ ಸಹ ಕರಕುಶಲ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಎಸ್., ಕೊಪ್ಪಳ ಜಿಲ್ಲಾಧಿಕಾರಿ ನಳಿನ ಅತುಲ, ನಗರ ಸಭೆ ಪೌರಾಯುಕ್ತ ಗಣೇಶ, ಜಿಲ್ಲಾ ಕೈಗಾರಿಕಾ ಇಲಾಖೆಯ ಎಸ್. ಎಂ.ಚವ್ಹಾಣ, ಜಿಲ್ಲಾ ಕ್ರೀಡಾ ಇಲಾಖೆಯ ಉಪನಿರ್ದೇಶಕ ವಿಠ್ಠಲ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!