
????????????????????????????????????
ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ : ಶಂಕ್ರಯ್ಯಾ.ಟಿ.ಎಸ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ,25- ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯಾ ಟಿ.ಎಸ್ ಹೇಳಿದರು.
ನಗರದ ಶ್ರೀಶೈಲಯ್ಯಾನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಶಿಕ್ಷಕರಾದವರು ಹೆಚ್ಚು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು.
ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು
ಕಾರ್ಯನಿರ್ವಹಿಸುವುದರ ಜೊತೆ ಜೊತೆಯಲ್ಲಿ ಸಮುದಾಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಮಕ್ಕಳನ್ನು ಸಿಮಿತ ಮಾಡಬಾರದು. ಮಕ್ಕಳಲ್ಲಿ ಅಡಗಿರುವ ದಿವ್ಯ ಶಕ್ತಿಯನ್ನು ಗುರುತಿಸಿ ಅವರ ಪ್ರತಿಭೆ ತಕ್ಕಂತೆ ಪೋತ್ಸಾಯ ನೀಡಿದಾಗ ಮಾತ್ರ ಉತ್ತಮ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗಿದ್ದು, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ.ಮಕ್ಕಳ ವಾರ್ಷಿಕೋತ್ಸವದ ಜೊತೆಯಲ್ಲಿ ಕನ್ನಡ ನಾಡು- ನುಡಿಗಳ ವಿಚಾರವನ್ನು ತಿಳಿಸುವುದರ ಜೊತೆಗೆ ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸುವ ಕಾರ್ಯ ಮಾಡಿರುವ ಕಾರ್ಯ ಇತರೇ ಶಾಲೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ತಗಡಿನಮನಿ, ಅಕ್ಷರ ದಾಸೋಹ ಅಧಿಕಾರಿ ಹನುಮಂತಪ್ಪ ಮಾತನಾಡಿದರು.
ಶ್ರೀಶೈಲನಗರದ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲನಾಗಮ್ಮ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭೆಯ ಸದಸ್ಯರಾದ ಅಮ್ಜದ ಪಟೇಲ ಮಾತನಾಡಿ,ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗಾಗಿ ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ ,ಸಮವಸ್ತç, ಕ್ಷೀರಭಾಗ್ಯದಡಿಯಲ್ಲಿ ಹಾಲಿನ ಜೊತೆಯಲ್ಲಿ ರಾಗಿ ಮಾಲ್ಟಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.
ಶ್ರೀಶೈಲನಗರ ಶಾಲೆಯ ಮುಖ್ಯೋಪಾಧ್ಯಾರು ಹಾಗೂ ಎಲ್ಲಾ ಶಿಕ್ಷಕರು ಸೇರಿಕೊಂಡು ಶಾಲಾ ವಾರ್ಷಿಕೋತ್ಸವ ಅಂಗವಾಗಿ ಧಾತ್ರಿ ಶಿಕ್ಷಣದೊಂದಿಗೆ ಮೈತ್ರಿ ಎಂಬ ಪರಿಕಲ್ಪನೆ ಇಟ್ಟುಕೊಂಡು ಮಾಡಿದ ಕಾರ್ಯಕ್ರಮ ಬಹಳ ಅದ್ಬುತವಾದ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಜೀವನದಲ್ಲಿ ಅನೇಕ ವಿಷಯಗಳಿಗೆ ನಾವು ಮೈತ್ರಿ ಮಾಡಿಕೊಳ್ಳುತ್ತವೆ. ಆದರೆ ಮಕ್ಕಳ ಶಿಕ್ಷಣದೊಂದಿಗೆ ಅವರ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಮೈತ್ರಿ ವಿಚಾರ ವ್ಯಕ್ತವಾಗಿರುವುದ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಕವಿತಾ ಹ್ಯಾಟಿ, ಶಿಕ್ಷಣ ಸಂಯೋಜಕ ಭೀಮಪ್ಪ ಹೂಗಾರ, ಬಿ.ಆರ್.ಪಿ.ಶರಣಪ್ಪ
ರಡ್ಡೇರ, ಸಿ.ಪಿ.ಆರ್.ಪಿಗಳಾದ ಹನುಮಂತಪ್ಪ ಕುರಿ, ಹುಲುಗಪ್ಪ ಭಜಂತ್ರಿ, ಮುಖಂಡ ಮೈಬೂಬಸಾಬ ಅರಗಂಜಿ, ಹಜರತ ಅಲಿ ಬಹದ್ದೂರಬಂಡಿ, ಫೀರಸಾಬ, ಮೈನುದ್ದಿನಸಾಬ ಬಳ್ಳಾರಿ, ವಸಿಂ ಬಾಗಲಿ ಮುಂತಾದವರು ಹಾಜರಿದ್ದರು.