
ಗುನ್ನಳ್ಳಿ ಗ್ರಾಮದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಿರೇಸಿದೋಗಿ ಉಪ ಕೇಂದ್ರದ ಗುನ್ನಳ್ಳಿ ಗ್ರಾಮದಲ್ಲಿ ಜೂ.05 ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮಮನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಎಂಬ ಘೋಷ ವಾಕ್ಯವನ್ನು ಹೇಳುತ್ತಾ ಹಾಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ತಂಬಾಕು ಪಾಯದ ಬಗ್ಗೆ ಜಾಗೃತಿ, ಅಭಾ ಕಾರ್ಡ್ ಸೃಜನೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಓಖಿಇP ,ಓಐಇP ಕುರಿತು ಆರೋಗ್ಯ ಶಿಕ್ಷಣದ ಅರಿವು ಮೂಡಿಸಲಾಯಿತು.
ಈ ಸಂದರ್ಭ ಡಾ.ಸವಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜ್, ಪಿಎಚ್‌ಸಿಒ ಸವಿತಾ, ಎನ್‌ಸಿಡಿ ಸೆಲ್‌ನ ಭೀಮಾಂಬಿಕಾ, ಡಿಇಒ ಪಲ್ಲವಿ ಹಾಗೂ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.