WhatsApp Image 2024-05-28 at 5.13.45 PM

ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 28- ಜೀವವಿಮಾ ಪ್ರತಿನಿಧಿಗಳು ರಾಜ್ಯ ಮತ್ತು ದೇಶ ಮಟ್ಟದಲ್ಲಿ ಸಂಘಟನೆ ಆಗಬೇಕು ಇದಕ್ಕೆ ಪ್ರತಿನಿಧಿಗಳ ಸಹಕಾರ ಮುಖ್ಯ ಎಂದು ಸಂಘಟನೆಯ ಹೊಸಪೇಟೆ ಘಟಕದ ನೂತನ ಅಧ್ಯಕ್ಷ ಸೈಯದ್ ಬಶೀರ್ ಅಹಮದ್ ಹೇಳಿದರು.

ನಗರದ ಗೌತಮ್ ಬುದ್ಧ ಫಂಕ್ಷನ್ ಹಾಲಿನಲ್ಲಿ ನಡೆದ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ೧೩ನೆಯ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಬಶೀರ್ ಅಹ್ಮದ್ ಸಂಘಟನೆಯನ್ನು ಮುಂದಿನ ಪೀಳಿಗೆಗೆ ಸುಭದ್ರ ಗೊಳಿಸಬೇಕಿದೆ ಮನೆಯಲ್ಲಿ ಯಾರು ವಾಸಿಸುತ್ತಾರೆ ಎನ್ನುವುದು ಮುಖ್ಯವಲ್ಲ ಆದರೆ ಮನೆಯೆಷ್ಟು ಸುಭದ್ರವಾಗಿದೆ ಎನ್ನುವುದು ಮುಖ್ಯವಾಗಿದೆ ನಮಗೆ ಎಲ್ಐಸಿ ನಿಗಮ ಹಾಗೂ ಸಂಘಟನೆ ಕೂಡ ಮುಖ್ಯ ಪ್ರತಿನಿಧಿಗಳ ನ್ಯಾಯೋಚಿತ ಹಕ್ಕು ಮತ್ತು ಬೇಡಿಕೆಗಾಗಿ ಸಂಘಟನೆ ಅತಿ ಅವಶ್ಯಕ ನಮ್ಮ ದುಡಿಮೆಯ ಕೆಲಸವನ್ನು ಸಂಘಟನೆಗೆ ಮೀಸಲಿಡಬೇಕು ಜೊತೆಗೆ ಪ್ರತಿನಿಧಿಗಳು ಉತ್ತಮ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಖಿಲ ಭಾರತ ಸಮಿತಿಯ ಕಾರ್ಯಾಧ್ಯಕ್ಷರಾದ ಎಲ್ ಮಂಜುನಾಥ್ ಮಾತನಾಡಿ ಜೀವ ವಿಮಾ ಪ್ರತಿನಿಧಿಗಳ ಸಮೂಹವು ನಿರಂತರ ಶ್ರಮಪಡುತ್ತಿದೆ ಪ್ರತಿನಿಧಿಗಳು ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು, ಬೇಡಿಕೆ ಈಡೇರಿಕೆಗೆ ಹೋರಾಟವೊಂದೇ ಮಾರ್ಗ ಎಂದರು. ಕೇಂದ್ರ ಸರ್ಕಾರದ ನೀತಿಗಳು ಪ್ರತಿನಿಧಿಗಳ ವ್ಯಾಪಾರಕ್ಕೆ ಮಾರಕವಾಗಿವೆ ಮತ್ತು ಕೇಂದ್ರ ಸರ್ಕಾರ ಐಆರ್‌ಡಿಎ ಮುಖಾಂತರ ನಾನಾ ಕಾನೂನುಗಳನ್ನು ಪ್ರತಿನಿಧಿಗಳ ಮೇಲೆ ಹೇರುತ್ತಿದೆ ಇದರ ಪರಿಣಾಮ ನೇರವಾಗಿ ಪ್ರತಿನಿಧಿಗಳ ಮೇಲೆ ಆಗುತ್ತಿದೆ ಎಂದು ತಿಳಿಸಿದರು.

ನೂತನ ಕಾರ್ಯಕಾರಿ ಸಮಿತಿಗೆ ೨೭ ಜನರ ಸದಸ್ಯರನ್ನು ಒಳಗೊಂಡ ವಾರ್ಷಿಕ ಮಹಾಸಭೆಯು ಸರ್ವಾನುಮತದಿಂದ ಆಯ್ಕೆಯಾಯಿತು.

ನೂತನ ಅಧ್ಯಕ್ಷರಾಗಿ ಸೈಯದ್ ಬಶೀರ್ ಅಹಮದ್ ಉಪಾಧ್ಯಕ್ಷರಾಗಿ ಕೆ ಪಂಪಾಪತಿ ಹೆಚ್ ಕೊಟ್ರೇಶಪ್ಪ, ಸರಸ್ವತಿ, ಕೆ ನೌಶಾದ್ ಅಲಿ ಆಯ್ಕೆಯಾದರು, ಖಜಾಂಚಿಯಾಗಿ ಖಾಸಿಂಸಾಬ್ ಇವರನ್ನು ಆಯ್ಕೆ ಮಾಡಲಾಯಿತು. ಸಹ ಕಾರ್ಯದರ್ಶಿಗಳಾಗಿ ತಿಮ್ಮರಾಜು, ಕೆ ಮಲ್ಲಿಕಾರ್ಜುನ ಚೆನ್ನಪ್ಪ, ಶಿಲ್ಪಾ ರಾಣಿ, ಮತ್ತು ಖಜಾಂಚಿಯಾಗಿ ಟಿ ಪಾಂಡುರಂಗ ರಾವ್ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಸ್ಕರ್ ಬಳಗಾನೂರ ರವರು ವಹಿಸಿದ್ದರು ಉದ್ಘಾಟನೆ ಎ ಎಸ್ ಲೋಕೇಶ್ ಶೆಟ್ಟಿ ಅವರು ಮಾಡಿದರು.

ಮುಖ್ಯ ಅತಿಥಿಗಳಾಗಿ ಡಿಸಿ ಶಿವಮೂರ್ತಿ ಎಸ್ ವಲಿ ಮೋಹಿದೀನ್ ಜಿಎನ್ ತಿಪ್ಪೇಸ್ವಾಮಿ ಎಂ ಎಸ್ ಭಟ್ ಡಿ ಶ್ರೀನಿವಾಸ್ ಮತ್ತು ಸಿಐಟಿಯು ವತಿಯಿಂದ ಆರ್ ಭಾಸ್ಕರ್ ರೆಡ್ಡಿ ಜೆ ಪ್ರಕಾಶ್ ಹಾಜರಿದ್ದರು. ಕೆ ನೌಶಾದ್ ಅಲಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರಂಭದಲ್ಲಿ ಶತಕ ವೀರ ಪ್ರತಿನಿಧಿಗಳು ಎಂ ಡಿ ಆರ್ ಟಿ ಪ್ರತಿನಿಧಿಗಳು ಮತ್ತು ೨೫ ವರ್ಷ ಪೂರೈಸಿದ ಎಲ್ಲಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎ ಭಾಸ್ಕರ್ ರಾವ್ ರಾಜ ಪಿ ಮಂಜುನಾಥ್ ರಮೇಶ್ ಶೆಟ್ಟಿ,ಭಾರತಿ ದಿನಕರ ಶಾರದ,ಶಶಿಕಲಾ, ಜಮೀರ ಬೇಗಂ,ದೇವರಾಜ್, ಮುಂತಾದ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!