29gvt3

ಡಾ.ಬಸವರಾಜ ಪರ ಮುನವಳ್ಳಿ ಮತಯಾಚನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 30- ವಿಧಾನಸಭಾ ಕ್ಷೇತ್ರದ ಸೂರ್ಯ ನಾಯಕ್ ತಾಂಡದಲ್ಲಿ ನಿಕಟಪೂರ್ವ ಶಾಸಕ ಪರಣ್ಣ ಮುನವಳ್ಳಿ ಬಿಜೆಪಿ ಅಭ್ಯರ್ಥಿ ಡಾ/ಕೆ ಬಸವರಾಜ್ ಪರವಾಗಿ ಮತಯಾಚನೆ ಮಾಡಿದರು.

ನಿಕಟಪೂರ್ವ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರಂದ್ರ ಮೋದಿಜೀಯವರ ಅಭಿವೃದ್ಧಿ ಕಾರ್ಯಗಳ ಈಗಾಗಲೇ ತಿಳಿದಿದೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಈ ದೇಶದ ಅಭಿವೃದ್ಧಿಯ ವೇಗ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲಿದೆ, ಈಗಾಗಲೇ ದೇಶದ ಜನತೆ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿ ಮಾಡಲು ನಿರ್ಧರಿಸಿದ್ದು, ಎಲ್ಲೆಡೆ ಭಾರತೀಯ ಜನತಾ ಪಾರ್ಟಿಯ ಗೆಲುವಿನ ವಾತಾವರಣ ಸೃಷ್ಟಿಯಾಗಿದೆ.

ಈ ಸಂದರ್ಭದಲ್ಲಿ ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಶಂಕರನಾಯ್ಕ್, ಕನಕರಾಜ್ ನಾಯಕ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!