
ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ : ಅವಧಿ ವಿಸ್ತರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ದದೇಗಲ್‌ನ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿAದ (ಜಿಟಿಟಿಸಿ) 2024-25ನೇ ಸಾಲಿಗೆ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಜಿಟಿಟಿಸಿ ಕೇಂದ್ರದಲ್ಲಿ 3+1 ವರ್ಷ ಅವಧಿಯ ಡಿಪ್ಲೋಮಾ ಇನ್ ಎಲೆಕ್ಟಾçನಿಕ್ಸ್ & ಕಮ್ಯೂನಿಕೇಷನ್ ( ಇ&ಸಿ), ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ (ಡಿಎಂಸಿಹೆಚ್) ಹಾಗೂ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿಟಿಡಿಎಂ) ಕೋರ್ಸುಗಳಿಗೆ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್ ಇಲ್ಲಿಗೆ ಖುದ್ದಾಗಿ ಬಂದು ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಜುಲೈ 15 ರೊಳಗಾಗಿ ಸಲ್ಲಿಸಬೇಕು. ಜಿಟಿಟಿಸಿ ಕೇಂದ್ರದಲ್ಲಿ ಕೆಲವೇ ಸೀಟುಗಳು ಮಾತ್ರ ಲಭ್ಯವಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ ಕಾರ್ಯಾಲಯಕ್ಕೆ ಅಥವಾ ಮೊ.ಸಂ: 7507094445, 9986088894 ಗೆ ಸಂಪರ್ಕಿಸಬಹುದಾಗಿದೆ ಎಂದು ತರಬೇತಿ ಕೇಂದ್ರದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.