
ತಾಲೂಕ ಬಣಜಿಗ ಮಹಿಳಾ ಘಟಕದಿಂದ ಕಾಯಕ ಸಂತೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,20- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಪ್ಪಳ ನಗರ ಮತ್ತು ತಾಲೂಕ ಬಣಜಿಗ ಮಹಿಳಾ ಘಟಕದಿಂದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ, ಕಾಯಕ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಮ್ಮ ಸಮಾಜದ ಮಹಿಳಾ ಉದ್ಯಮೆದಾರರು ಉತ್ಪಾದಿಸಿದ ಸುಮಾರು ೨೩ ಮಳಿಗೆಗಳನ್ನೊಳಗೊಂಡ ವಿವಿಧ ಖಾದ್ಯ ತಿನಿಸುಗಳ ಆಹಾರ ಪದಾರ್ಥಗಳ ಅಂಗಡಿ ಹಾಗೂ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಬಣಜಿಗ ಮಹಿಳಾ ಘಟಕ ಹಿರಿಯ ಸದಸ್ಯರು ಉದ್ಗಾಟಿಸಿದರು. ಹಾಗೆಯೇ, ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಗಿರಿಜಾ ಬುಳ್ಳಾ ಮತ್ತು ಶ್ರೀಮತಿ ಸುಮಂಗಲಾ ಸೋಮಲಾಪುರರವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಸ್ವ-ಉದ್ಯೋಗ ಮಾಡಬೇಕೆಂದು ತಿಳಿಸಿದರು.
ಕೊಪ್ಪಳ ತಾಲೂಕ ಬಣಜಿಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅಪರ್ಣಾ ಬಿ. ಬಳ್ಳೋಳ್ಳಿ ಇವರು ಮಾತನಾಡಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿ ಎಲ್ಲಾ ಸಮಾಜದ ಮಹಿಳಾ ಉದ್ಯಮೆದಾರರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆದು, ಸ್ವಾವಲಂಭಿಗಳಾಗಿ ಇನ್ನುಳಿದ ಮಹಿಳೆಯರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಬಣಜಿಗ ಮಹಿಳಾ ಸಮಾಜದ 18 ಹಿರಿಯ ಜೀವಿಗಳಿಗೆ ಸನ್ಮಾಸಿ ಗೌರವಿಸಲಾಯಿತು.
ನಗರದ ಹಿರಿಯರಾದ ಶ್ರೀ ಶಾಂತಣ್ಣ ಮುದಗಲ್, ಶ್ರೀ ಗವಿಸದ್ದಪ್ಪ ಕೊಪ್ಪಳ ಹಾಗೂ ಇನ್ನೀತರರು ಭಾಗವಹಿಸಿ ಮಹಿಳಾ ಉದ್ಯಮೆದಾರರಿಗೆ ಪ್ರೋತ್ಸಾಹಿಸಿದರು.
ಕೊಪ್ಪಳ ನಗರ ಮತ್ತು ತಾಲೂಕ ಬಣಜಿಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಧಾ ಶೆಟ್ಟರ ವಂದನಾರ್ಪಣೆ ಸಲ್ಲಿಸಿದರು.