
ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭ್ರಮ ದಸರಾ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 25 – ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಿರಂತರ ಒಂಬತ್ತು ದಿನಗಳ ಕಾಲ ಶ್ರೀ ವೆಂಕಟರಮಣನಿಗೆ ವಿಶೇಷ ಪೂಜೆ, ಅಲಂಕಾರ, ಅನ್ನ ಸಂತರ್ಪಣೆ ಹಾಗು ಸಂಜೆ ವೇಳೆಯಲ್ಲಿ ಪಲ್ಲಕ್ಕಿ ಉತ್ಸವ, ತೊಟ್ಟಿಲ ಸೇವೆ, ನಂತರ ಭಕ್ತರಿಗೆ ಅನ್ನ ಸಂತರ್ಪನೆ ಕಾರ್ಯ ನಿರಂತರವಾಗಿ ನಡೆದಿದೆ.
ಸೋಮವಾರ ಶ್ರೀ ವೇಂಕಟೇಶ್ವರ ಮೂರ್ತಿಗೆ ಗಂದದ ವಿಶೇಷ ಅಲಂಕಾರವನ್ನು ಅರ್ಚಕರಾದ ವರ್ದಾಚಾರ್ಯಜೋಶಿ ಸಿಂಧನೂರ ಇವರು ಅಲಂಕಾರ ಮಾಡಿದ್ದರು.
ಈ ದೇವಸ್ಥಾನಕ್ಕೆ ಐದು ಸಮಾಜದ ಜನರು ವಿಶೇಷವಾಗಿ ಸೇವೆ ಸಲ್ಲಿಸುತ್ತಾರೆ, ಬ್ರಾಹ್ಮಣರು ನವರಾತ್ರಿ ಸಂದರ್ಬದಲ್ಲಿ ಪೂಜಾ ಕಾರ್ಯ ಕ್ರಮವನ್ನು ನಿರ್ವಹಿಸುತ್ತಾರೆ, ಗೊಲ್ಲರು ದಸರಾ ಹಬ್ಬದ ದಿನದಂದು ಹಾಲು ಕಂಬ ಏರುವ ಕಾರ್ಯಕ್ರಮ ನೆರವೇರಿಸುತ್ತಾರೆ, ಉಪ್ಪಾರ ಸಮಾಜದ ಜನರು ಹೊಂಡ ತೆಗೆಯುವ ಕಾರ್ಯ ನಿರ್ವಹಿಸುತ್ತಾರೆ.
ರಜಪೂತ ಸಮಾಜದ ಭಕ್ತರು ಭಜನಾ ಕಾರ್ಯ ನಿರ್ವಹಿಸುತ್ತಾರೆ. ವೈಶ್ಯ ಸಮಾಜದ ಜನರು ಮಂದಿರದ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಸೋಮವಾರ ನಡೆದ ವಿಶೇಷ ಪೂಜೆ ಹಾಗು ಅನ್ನ ಸಂತರ್ಪನೆ ಕಾರ್ಯದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ಸಮಾಜದ ಹಿರಿಯರಾದ ಬಾಳಾಚಾರ್ಯ ಜೋಶಿ, ಸುಭಾಸಾಚಾರ್ಯ ಜೋಶಿ, ಅರ್ಚಕ ವರದಾಚಾರ್ಯ ಜೋಶಿ, ಸಮಾಜದ ಯುವಕರು, ಮಹಿಳೆಯರು ಭಾಗವಹಿಸಿದ್ದರು. ವೈಶ್ಯ ಸಮಾಜದ ಅಧ್ಯಕ್ಷರಾದ ಹನುಮೇಶಪ್ಪ ಖ್ಯಾಡೆದ, ಸಮಾಜದ ಹಿರಿಯರಾದ ಶಂಕರ ಇಲ್ಲೂರ, ಶ್ರೀನಿವಾಸ ದರೋಜಿ, ಮಂಜು ನಾಥ ಕಂದಗಲ್, ಪಾಂಡುರಂಗ ದರೋಜಿ, ಯಂಕಣ್ಣ ಪೂಜಾರ ಹಾಗು ವಿವಿಧ ಸಮಾಜದ ಭಕ್ತರು ಮುಖಂಡರು ಉಪಸ್ಥಿತರಿದ್ದರು.