
ತ್ಯಾಜ್ಯದಿಂದ ರೈತರ ಭೂಮಿಗೆ ಮಾರಕ ವಾಗದಿರಲಿ, ಬಸವಣ್ಣ ಕೆನಲ್ ಶುದ್ಧವಾಗಲಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,8- ತುಂಗಭದ್ರಾ ನಂದಿಯಿಂದ 17 ಕಿ.ಮೀ ಉದ್ದ,3,000 ಸಾವಿರಕ್ಕೂ ಹೆಚ್ಚು ಎಕರೆ ಹೊಲ ಗದ್ದೆಗಳಿಗೆ ನೀರು ಹರಿಯುವ ಬಸವ ಕೆನೆಲ್ ಗೆ 3 ತಿಂಗಳಿಂದ ಕಾಮಗಾರಿಯ ಮತ್ತು ಬರಗಾಲ ಹಿನ್ನೆಲೆಯಲ್ಲಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಸಾರ್ವಜನಿಕ ಕಸವನ್ನು ಮತ್ತು ದಿನ ನಿತ್ಯದ ತಂದು ಸುರಿದಿದ್ದರಿಂದ ಕೆನಲ್ ಗಳು ಅಶುದ್ಧವಾಗಿದ್ದವು.
ವಿಜ್ಞಾನಿಗಳ ಸಂಶೋಧನೆ ಪ್ರಕಾರ ಭೂಮಿಯನ್ನು ಹೊರತು ಪಡಿಸಿ ಪ್ರಕೃತಿ ಪರಿಸರವನ್ನು ಕಲಾಕಾಲಕ್ಕೆ ತನ್ನಷ್ಟಿಗೆ ತಾನೇ ಶುದ್ಧ ಮಾಡಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ.
ನೀರು ಮಲಿನ ವಾದರೆ 7ಕಿಲೋಮೀಟರ್ ವರೆಗು ಹರಿದರೆ ಶುದ್ಧವಾಗುತ್ತದೆ, ವಾತಾವರಣ ಕಲುಷಿತ ವಾದರೆ ಸಿಡಿಲು ಸಂಭವಿಸಿದ ಸಂದರ್ಭದಲ್ಲಿ ಶುದ್ಧವಾಗುತ್ತದೆ, ಮನುಷ್ಯ 600 ಕಿಲೋಮೀಟರ್ ಕ್ರಮಿಸಿದರೆ ಆತನ ಮನಸ್ಥಿತಿ ಬದಲಾಗುತ್ತದೆ. ಆದರೆ ಮಣ್ಣು ಮಲಿನವಾದರೆ ಅದನ್ನು ಶುದ್ಧ ಮಾಡಿಕೊಳ್ಳುವ ಶಕ್ತಿ ಪ್ರಕೃತಿಗೂ ಸಾಧ್ಯವೇ ಇಲ್ಲ ಎನ್ನುವುದು ತಜ್ಞರು ಹಲವಾರು ವರ್ಷಗಳಿಂದ ಸಂಶೋಧನೆ ನಡೆಸಿ ಕಂದುಕೊಂಡ ಉತ್ತರವಾಗಿದೆ. ಒಂದುವೇಳೆ ಮಣ್ಣನ್ನು ಶುದ್ಧಗೊಳಿಸಬೇಕಾದರೆ ಹಲವು ಸಂಶೋಧನೆಗಳ ಮೂಲಖ 50ವರ್ಷಕ್ಕೂ ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವುದು ತಜ್ಞರಅಭಿಪ್ರಾಯ.
ಬಸವ ಕೆನಲ್ ತ್ಯಾಜ್ಯ ದಿಂದ ತುಂಬಿ, ಕೊಳಕು ನಾರುತ್ತಾ ನಿಂತ ನೀರು ಮಲಿನವಾಗಿ ಸೊಳ್ಳೆ ಮತ್ತು ರೋಗಗಳನ್ನು ಹುಟ್ಟು ಹಾಕುತ್ತಿರುವ ಕಾರ್ಖಾನೆಯಾಗಿತ್ತು.
ಇತ್ತೀಚೆಗೆ ನಗರದಲ್ಲಿರುವ ಬಸವ ಮತ್ತು ರಾಯ ಕೆನೆಲ್ ಗಳಿಗೆ ತುಂಗಭದ್ರಾ ನಂದಿಯಿಂದ ನೀರು ಹರಿ ಬಿಡಲಾಗಿದೆ, ನಗರದ ಉದ್ದಕ್ಕೂ ತ್ಯಾಜ್ಯ ದಿಂದ ತುಂಬಿದ್ದ ಕಾಲುವೆಗೆ ನೀರು ಬಿಟ್ಟಿದ್ದರಿಂದ ಅಲ್ಲಲ್ಲಿ ಕಸ ಶೇಖರಾಣೆಯಾಗಿ ನೀರಿನ ಮೇಲೆ ತಿಪ್ಪೆಯಂತೆ ರಾಶಿ ರಾಶಿ ಕಸ ಕಾಣುತ್ತಿತ್ತು, ಇದನ್ನರಿತ ನಗರ ಸಭೆ ಜೆಸಿಬಿಯ ಮುಖಾಂತರ ತೆಪ್ಪದಂತಿರುವ ಕಸವನ್ನು ಕೆನಲ್ ಪಕ್ಕದಲ್ಲೇ ವಿಲೇವಾರಿ ಮಾಡಿದ್ದಾರೆ.
ವಿಲೇವಾರಿ ಮಾಡಿದ ಕಸ ಬಿರು ಬೇಸಿಗೆಗೆ ಹೊಣಗಿ, ಗಾಳಿಗೆ ಸಿಲುಕಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವು ಮತ್ತೆ ಕೆನಲ್ ಗೆ ಬೀಳುತ್ತಿದೆ. ಇರಿಂದ ನೀರು ಮಲಿನವಾಗುವುದಿರಲಿ ಅದರಲ್ಲಿ ಕೊಚ್ಚಿ ಹೋಗುವ ಮಣ್ಣುಸಹ ಮಲಿನ ವಾಗಿ ರೈತರ ಹೊಲ ಗದ್ದೆಗಳಿಗೆ ಹರಿದು ಹೋಗುತ್ತದೆ. ಇದರಿಂದ ರೈತರ ಭೂಮಿಗಳು ಮಲಿನವಾಗಿ ಬೆಳೆಗಳು ಕುಂಠಿತವಾಗಿವೆ. ಇದರಿಂದ ಮುಂದಿನ ಪೀಳಿಗೆಗೆ ಆಹಾರದ ಅಹಕಾರ ಉಂಟಾಗಲಿದೆ.
ನಗರದ ಕೊಳಚೆ ನೀರನ್ನು ತೆರೆದ ಚರಂಡಿಗಳ ಮುಖಾಂತರ ಈ ಕೆನಲ್ ಗಳಿಗೆ ಹರಿ ಬಿಡಲಾಗಿದೆ. ಜಲ ಸಾರಿಗೆ ಮತ್ತು ಒಳ ಚರಂಡಿ ನಿಯಮಗಳ ಪ್ರಕಾರ ಇದು ಅಪರಾಧವೆಂದು ತಿಳಿದಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೂಖ ಪ್ರೇಕ್ಷಕರಂತೆ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ. ಅಧಿಕಾರಿಗಳು ಕಾನೂನಿಗೆ ಬೆಲೆ ಕೊಡದೆ ರಾಜಾರೋಷವಾಗಿ ನಿಯಮ ಉಲ್ಲಂಘನೆ ಮಾಡಿರುವುದು ಇಲ್ಲಿ ಕಂಡು ಬರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನಗರಸಭೆಯು ಕೆನೆಲ್ ಗಳಲ್ಲಿ ಶೇಖರಣೆಯಾಗುವ ತ್ಯಜ್ಯಗಳ ವಿಲೇವಾರಿ ಕುರಿತು ನಿರ್ಲಕ್ಷ ದಿಂದ ಅವೈಜ್ಞಾನಿಕವಾಗಿ ಕಸವನ್ನು ಎಲ್ಲಂದರಲ್ಲಿ ಬಿಸಾಡುತ್ತಿದ್ದಾರೆ. ಈ ಕಸವು ಮತ್ತೆ ನೀರಿನೊಂದಿಗೆ ಸೇರಿ ಮಲಿನವಾಗುತ್ತದೆ. ರೈತರಿಗೆ ನಷ್ಟವಾಗುವುದನ್ನು ಅರಿಯದ ನಗರಸಭಾ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ಕೊಟ್ಟು ರೈತರ ಭೂಮಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಇಲ್ಲಿನ ರೈತರ ಆಗ್ರಹವಾಗಿದೆ.