
ರಾಘವ ಮೆಮೋರಿಯಲ್ ಅಸೋಶಿಯೇಶನ್ ವತಿಯಿಂದ ದಿ. ಹೆಚ್. ಲಿಂಗಾರೆಡ್ಡಿ ಅವರ 48 ನೇ ಪುಣ್ಯತಿಥಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ನಗರದಲ್ಲಿ ರಾಘವ ಮೆಮೋರಿಯಲ್ ಅಸೋಶಿಯೇಶನ್, ಬಳ್ಳಾರಿ ವತಿಯಿಂದ 24-02-2024ರಂದು ರಾಘವ ಕಲಾ ಮಂದಿರದಲ್ಲಿ ಬೆಳ್ಳಗ್ಗೆ 8-45ಕ್ಕೆ ದಿ ಹೆಚ್ ಲಿಂಗಾರೆಡ್ಡಿ ಅವರ 48 ನೇ ಪುಣ್ಯತಿಥಿ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ದಿವಂಗತ ಹೆಚ್. ಲಿಂಗಾ ರೆಡ್ಡಿ ಕುಟುಂಬದವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್, ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ,ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು, ಚೆಲ್ಲಾ ಅಮರೇಂದ್ರ ನಾಥ ಚೌದರಿ ಎಲ್ಲರೂ ಸೇರಿ ದಿವಂಗತ ಹೆಚ್ ಲಿಂಗಾ ರೆಡ್ಡಿ ರವರ ಸಾಧನೆಯನ್ನು ಕುರಿತು ಸ್ಮರಿಸಿದರು.
ಸದಸ್ಯರುಗಳಾದ ಎನ್ ಬಸವರಾಜ್, ಸುರೇಂದ್ರ ಬಾಬು,ವಿ ರಾಮಚಂದ್ರ, ಶೇಷ ರೆಡ್ಡಿ ,ಜಿ ಪ್ರಭಾಕರ, ಕೆ ಕೃಷ್ಣ, ಟಿ ಜಿ ವಿಠಲ್, ಕೆ ಪೊಂಪನಗೌಡ,ಜಿ ಆರ್ ವೆಂಕಟೇಶಲು, ಭೀಮನೇನಿ ಭಾಸ್ಕರ್,ರಮಣಪ್ಪ ಭಜಂತ್ರಿ ಮತ್ತು ಕಲಾಭಿಮಾನಿಗಳು ಇದ್ದರು