
ದೇಶದ ಸ್ವಾತಂತ್ರ್ಯಕ್ಕಾಗಿ ಮಿಡಿದ ಯುವ ಕ್ರಾಂತಿಕಾರಿ ಅಜಾದ್ : ಎಐಡಿಎಸ್ಓ ಜಿಲ್ಲಾಧ್ಯಕ್ಷರು ಈರಣ್ಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,27- ಭಾರತ ದೇಶ ವನ್ನು ಬ್ರಿಟಿಷರ ದಾಸಿಯದಿಂದ ಮುಕ್ತಿಗೊಳಿಸಲು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರು ಯುವ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಎಂದು ಎ ಐ ಡಿ ಎಸ್ ಓ ಜಿಲ್ಲಾ ಅಧ್ಯಕ್ಷರು, ಕೆ ಈರಣ್ಣ ಹೇಳಿದರು.
ಆಜಾದ್ ಅವರ ಹುತಾತ್ಮ ದಿನವನ್ನು ವಿದ್ಯಾರ್ಥಿಗಳಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಈರಣ್ಣ ಮಾತನಾಡುತ್ತಾ ಚಂದ್ರಶೇಖರ್ ಆಜಾದವರು 14ನೇ ವಯಸ್ಸಿನಲ್ಲಿ ಭಾರತ ದೇಶವನ್ನು ಸ್ವಾತಂತ್ರ್ಯ ಭಾರತ ಕನಸಿನೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಯೋಧರು ಎಂದರು.
1,931 ಫೆಬ್ರವರಿ 27ರಂದು ತನ್ನ 24ನೇ ವಯಸ್ಸಿನಲ್ಲಿ ದೇಶ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಹಣವಾಗಿಟ್ಟಿರ ಯೋಧ ಎಂದು ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಇವತ್ತಿಗೂ ನಮ್ಮ ದೇಶದಲ್ಲಿ ಶಿಕ್ಷಣ ಖಾಸಗಿಕರಣ ನಿರುದ್ಯೋಗ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ನಿಲ್ಲುತ್ತಿಲ್ಲ ಎಂದರು.
ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ವಿಚಾರ ಮೈಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಉಪಾಧ್ಯಕ್ಷರು ಎಂ ಶಾಂತಿ ಮತ್ತು ಉಮಾಗಳ ಜತೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.