
ನನಗೆ ರಾಜಕೀಯ ಹೊಸದಲ್ಲ : ಡಾ.ಬಸವರಾಜ ಕ್ಯಾವಟರ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,27- ನನಗೆ ರಾಜಕೀಯ ಹೊಸದಲ್ಲ ನಮ್ಮ ತಂದೆ ಶಾಸಕರಾದಾಗಿನಿಂದ ರಾಜಕೀಯದ ಪರಿಚಯವಿದೆ ಸೇವೆ ಮಾಡುವ ಹಂಬಲವಿದೆ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಇದೀಗ ರಾಜಕೀಯ ಕ್ಷೇತ್ರದ ಮೂಲಕ ಸೇವೆ ಮಾಡ ಬಯಸಿದ್ದೇನೆ ಮೋದಿಯವರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಖ್ಯೆಯನ್ನು ಸೇರಿಸಲು ಕಮಲ ಚಿನ್ಹೆಗೆ ಮತ ಹಾಕಬೇಕು ಮತ್ತು ಹಾಕಿಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರು ಹೇಳಿದರು.
ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬೂತ್ ವಿಜಯ ಅಭಿಯಾನದ ಮೂಲಕ ಚಾಲನೆ ನೀಡಿದ ಮಾಜಿ ಸಚಿವ ಹಾಲಪ್ಪ ಆಚಾರ, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ವಿಧಾನ ಪರಿಷತ್ ಶಾಸಕಿ ಹೇಮಲತಾ ನಾಯಕ, ಮಸ್ಕಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಸಿಂಧನೂರಿನ ಮಾಜಿ ಸಂಸದ್ ಕೆ ವಿರೂಪಾಕ್ಷಪ್ಪ ಕರಿಯಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟರ್ ಅವರು ಇಲ್ಲಿನ ಮುಖಂಡರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ ಎಲ್ಲಾ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಾಣುತ್ತಿದೆ ಮತ್ತೊಮ್ಮೆ ಮೋದಿ ಸರ್ಕಾರಕ್ಕಾಗಿ ಎಲ್ಲರೂ ಸೇರಿ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ಮಾತನಾಡಿ ಈ ಬಾರಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ 12ಸಾವಿರ ಮತಗಳ ಅಂತರ ಕೊಡುತ್ತೇವೆ ಎಂದರು.
ಮಾಜಿ ಶಾಸಕ ಬಸವರಾಜ ಧಡೆಸುಗೂರು ಅವರು ಮಾತನಾಡಿ ಶಿವರಾಜ ತಂಗಡಗಿ ಸಚಿವರ ನಾಲಿಗೆ ಹರಿಬಿಟ್ಟಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಬಳ್ಳಾರಿ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಮೋಕ ಜಿಲ್ಲಾ ಉಪಾಧ್ಯಕ್ಷ ಮತ್ತು ಸಿರುಗುಪ್ಪ ಉಸ್ತುವಾರಿ ಗಾಳಿ ಶಂಕ್ರಪ್ಪ, ಸಿರುಗುಪ್ಪ ಮಂಡಲ ಅಧ್ಯಕ್ಷ ಹೆಚ್ಎಂ ಮಲ್ಲಿಕಾರ್ಜುನ ಸ್ವಾಮಿ ಕುಂಟನಾಳ, ಜಿಲ್ಲಾ ಯುವ ಅಧ್ಯಕ್ಷ ಎಂಎಸ್ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ದೊಡ್ಡಹುಲುಗಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ, ಜೆಡಿಎಸ್ ರಾಜ್ಯ ಯುವ ನಾಯಕ ರಾಜು ನಾಯಕ, ಪ್ರಕಾಶ್ ಗೌಡ, ಎಸ್ ಸಿ ಜಿಲ್ಲಾ ಅಧ್ಯಕ್ಷ ಮೇಕೆಲಿ ವೀರೇಶ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.