
ನರೇಗಾ ಕಾಮಗಾರಿಯನ್ನು ಪರಿಶೀಲನೆ ಮಾಡಿದ ರಾಜ್ಯಮಟ್ಟದ ಅಧಿಕಾರಿಗಳು
ಕರುನಾಡ ಬೆಳಗು ಸುದ್ದಿ
ವಿಜಯನಗರ,27- ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮ ಪಂಚಾಯತಿಗೆ ಬೆಂಗಳೂರಿನಿಂದ, ಆಯುಕ್ತಾಲಯದ ಅಧಿಕಾರಿಗಳಾದ, ಪಿ.ಜಿ.ವೇಣುಗೋಪಾಲ, ಜಂಟಿ ನಿರ್ದೇಶಕರು(ತಾಂತ್ರಿಕ) ಮತ್ತು ಆದರ್ಶ್.ಬಿ.ಡಿ.ರಾಜ್ಯ ಜಿ.ಐ.ಎಸ್. ಸಂಯೋಜಕರು ಬೆಂಗಳೂರು ರವರು ನರೇಗಾ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳ ದನದ ಕೊಟ್ಟಿಗೆ,ಸಮುದಾಯ ಆಧಾರಿತ ಕಾಮಗಾರಿಗಳ ಪೈಲ್ ಗಳನ್ನು ಇಂದು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಪರಿಶೀಲನೆ ಮಾಡಿದರು.
ನಂತರ ಬೂದು ನೀರು ನಿರ್ವಹಣೆ ಕಾಮಗಾರಿಗೆ ಆಯ್ಕೆ ಮಾಡಿದ ಸ್ಥಳ ಗಳನ್ನು ಹಾಗೂ ಹಾರುವನಹಳ್ಳಿ ಗ್ರಾಮದ ಹತ್ತಿರ ಸೋಮಪ್ಪನ ಹೊಲದ ಹತ್ತಿರ ಪ್ರಗತಿಯಲ್ಲಿರುವ ಮಲ್ಟಿ ಆರ್ಚ್ ಚೆಕ್ ಡ್ಯಾಂ ಕಾಮಗಾರಿಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಮೇಶ್ ಎಂ,ಕಾರ್ಯನಿರ್ವಾಹಕ ಅಧಿಕಾರಿಗಳು, ಬಸವರಾಜ ಎ.ಡಿ.ಪಿ.ಸಿ. ವಿಜಯನಗರ ಜಿ.ಪಂ. ರವರು, ಸುರೇಶ್ ತಾಂತ್ರಿಕ ಸಂಯೋಜಕರು, ಹೆಚ್ ನಾಗರಾಜ ಐಇಸಿ ಸಂಯೋಜಕರು, ಕಾಂತರಾಜ್ ಕೆ ತಾಂತ್ರಿಕ ಸಹಾಯಕರು (ತೋಟಗಾರಿಕೆ), ತಾಂತ್ರಿಕ ಸಹಾಯಕರು ಮಂಜುಳಾ, ರಾಘವೇಂದ್ರ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬಿ.ಎಪ್.ಟಿ ಸೋಮಣ್ಣ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.