
ಪೆಟ್ರೋಲ್ ಬೆಲೆ ಹೆಚ್ಚಳ
ನಾಳೆ ಜಿಲ್ಲೆಯಾಧ್ಯಂತ ಬಿಜೆಪಿ ಪ್ರತಿಭಟನೆ
ಕೊಪ್ಪಳ, 19- ಪೆಟ್ರೋಲ್ ಹಾಗೂ ಡಿಜೈಲ್ ಬೆಲೆ ಹೆಚ್ಚಳ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ಗುರುವಾರ 20 ರಂದು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ತೀವ್ರ ಗೊಳಿಸಲು ನಿರ್ದಸಿದ್ದು ಹಂತ ಹಂತವಾಗಿ ಹೋರಾಟ ತೀವ್ರ ಗೋಳಿಸುತ್ತೆವೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಾಗಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ನಡೆದಿದ್ದು ಜನ ಸಮನ್ಯರ ಜೀವನದ ಮೇಲೆ ಭಾರಿಪರಿಣಾಮ ಬಿರುತ್ತಿದ್ದು, ಸರ್ಕಾರ ಕರ್ನಾಟಕ ಮಾರಲು ಹೊರಟಿದೆ , ಸರ್ಕಾರದ ಜಾಗೆ ಮಾರಲು ಮುಂದಾಗಿತ್ತಿದೆ.
ಹಣ ಹೊಂದಿಸಲು ಸರ್ಕಾರ ಖಾಸಗಿ ಕಂಪನಿಗಳ ಸಲಹೆ ಪಡೆದು , ಸರ್ಕಾರಿ ಜಾಗೆಗಳ ಮಾರಾಟ ರಾಜ್ಯ ಮಾರಾಟ ಮಾಡಿದಂತೆ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳತನ ನಿತ್ಯ ನಡೆದಿದ್ದು ಪೋಲಿಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಜನರು ಪರದಾಡುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ, ಬಿಜೆಪಿ ಮಾಧ್ಯಮ ಪ್ರಮುಖರಾದ ಪ್ರಸಾದ ಗಾಳಿ ,ಮಹೇಶ ಹಾದಿಮನಿ ಇದ್ದರು.