
ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕೆ.ಎಸ್.ದೀಪಕ್ ಆಯ್ಕೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 16- 23 ರಂದು ತಮಿಳುನಾಡಿನ ಚೆನೈನಲ್ಲಿ ನಡೆಯಲಿರುವ ರಾಷ್ಟ್ರೀಯ ದಕ್ಷಿಣ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಇಲ್ಲಿನ ಗೋಕುಲ ನಗರದಲ್ಲಿರುವ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕೆ ಎಸ್ ದೀಪಕ್ ಆಯ್ಕೆ ಆಗಿದ್ದಾರೆ,,
ರಾಜ್ಯದ ಅತ್ಯುನತ್ತ ಏಕೈಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿವತಿಯಿಂದ ವಿದ್ಯಾರ್ಥಿ ಆಯ್ಕೆ ಆಗಿದ್ದಾರೆ. ತಮಿಳುನಾಡು ಫಿಜಿಕಲ್ ಎಜುಕೇಶನ್ ಅಂಡ್ ಸ್ಪೋಟ್ರ್ಸ್ ಯುನಿವರ್ಸಿಟಿ ಚೆನೈನಲ್ಲಿ ನಡೆಯುವ ಸ್ಪರ್ದೆಗೆಯಲ್ಲಿ ಪಾಲ್ಗೊಳ್ಳಲು ಅಣಿಯಾಗಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 11 ವಿದ್ಯಾರ್ಥಿಗಳ ಪೈಕಿ ವಿಜಯ ನಗರ ಜಿಲ್ಲೆ ಹೊಸಪೇಟೆ ವತಿಯಿಂದ ಕೆ ಎಸ್ ದೀಪಕ್ ತೆರಳುತ್ತಿರುವುದು ವಿಶೇಷವಾಗಿದೆ ಎಂದು ವಿಟಿಯು ಬೆಳಗಾವಿ ಹಾಗೂ ಹೊಸಪೇಟೆಯ ಪಿಡಿಐಟಿ ಪ್ರಕಟಣೆಯಲ್ಲಿ ತಿಳಿಸಿದೆ.