
ಪಿಂಚಣಿ ಸೌಲಭ್ಯಕ್ಕಾಗಿ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲು ಕಾರ್ಮಿಕರಿಗೆ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಪಿಂಚಣಿ ಸೌಲಭ್ಯಗಳನ್ನು ಪಡೆಯುತ್ತಿರುವ ನೋಂದಾಯಿತ ಕಟ್ಟಡ ಕಾರ್ಮಿಕರ ಮಾಹಿತಿಯನ್ನು ನೂತನ ತಂತ್ರಾAಶದಲ್ಲಿ ನಮೂದಿಸಲು ಸೂಚಿಸಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೀಡುತ್ತಿರುವ ಪಿಂಚಣಿ ಮುಂದುವರಿಕೆ ಸೌಲಭ್ಯಗಳ ಅರ್ಜಿಗಳನ್ನು ಮ್ಯಾನ್ಯೂವಲ್ ಹಾಗೂ ಸೇವಾಸಿಂಧು ತಂತ್ರಾಂಶದ ಮೂಲಕ ಸ್ವೀಕರಿಸಲಾಗುತ್ತಿದ್ದು, ಮಂಡಳಿಯು ಅಭಿವೃಧ್ದಿಪಡಿಸಲಾಗಿರುವ ನೂತನ ತಂತ್ರಾಂಶದಲ್ಲಿ ಈಗಾಗಲೇ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯು ಲಭ್ಯವಿರುವುದಿಲ್ಲ, ಹಾಗಾಗಿ ಈಗಾಗಲೇ ಪಿಂಚಣಿ ಮುಂದುವರಿಕೆಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಮ್ಯಾನ್ಯೂವಲ್ ಮತ್ತು ಸೇವಾ ಸಿಂಧು ತಂತ್ರಾಂಶದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರ ಲಾಗಿನ್‌ನಲ್ಲಿ ನೀಡಲಾಗಿರುವ Manual Pension Data Update Column ನಲ್ಲಿ ಮಾಹಿತಿ ಸಲ್ಲಿಸಬೇಕು.
ತಂತ್ರಾಂಶದಲ್ಲಿ ಫಲಾನುಭವಿಯ ಲೇಬರ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪಿಂಚಣಿ ಮಂಜೂರಾತಿ ಆದೇಶ ಪ್ರತಿ, ಉಳಿತಾಯ ಖಾತೆ ವಿವರ (ಪಾಸ್‌ಬುಕ್)ಗಳನ್ನು ಅಪ್‌ಡೇಟ್ ಮಾಡಿದ ನಂತರ ಪಿಂಚಣಿ ಮುಂದುವರಿಕೆಗಾಗಿ ಅರ್ಜಿದಾರರು ಅರ್ಜಿಯನ್ನು ಖುದ್ಧಾಗಿ ಆನ್‌ಲೈನ್ ಮುಖಾಂತರ ನೂತನ ತಂತ್ರಾಂಶದಲ್ಲಿ ಸಲ್ಲಿಸಬಹುದಾಗಿರುತ್ತದೆ.
ಅಪ್‌ಡೇಟ್ ಮಾಡಿದ ದಾಖಲೆಗಳನ್ನು ಸಂಬಂಧಪಟ್ಟ ತಾಲ್ಲೂಕಾ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ಕೊಪ್ಪಳ ಈ ಕಾರ್ಯಾಯಲಕ್ಕೆ ಸಂಪರ್ಕಿ¸ಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.