a475cc86-f84d-498a-a386-43cc7c331199

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ

ಕರುನಾಡ ಬೆಳಗು ಸುದ್ದಿ
ಕನಕಗಿರಿ, 21- ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವ್ಯಾಪ್ತಿಯ ಅಕಾಡೆಮಿ ಹಾಗೂ ಪ್ರಾಧಿಕಾರ ನೇಮಕಾತಿ ಆಯ್ಕೆಯಲ್ಲಿ ಪ್ರತಿ ಬಾರಿಯು ಪ್ರಾದೇಶಿಕ ಅಸಮಾನತೆ ಕಂಡು ಬರುತ್ತಿದ್ದು, ಈ ಬಾರಿ ನಮ್ಮ ಭಾಗದಲ್ಲಿ ಹೆಚ್ಚಿನ ವ್ಯಕ್ತಿಗಳನ್ನು ನೇಮಕ ಮಾಡಿರುವುದು ಸಂತಸದ ವಿಚಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ತಿಳಿಸಿದರು.
ಇಲ್ಲಿಗೆ ಸಮೀಪದ ನವಲಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯರಿಗೆ ಗುರುವಾರ ಆಯೋಜಿಸಿದ್ದ ಸನ್ಮಾನ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ನವಲಿ ಗ್ರಾಮವು ಕಲೆ, ಜಾನಪದ, ಸಾಹಿತ್ಯ, ಸಂಸ್ಕ್ರತಿಗೆ ಹೆಸರುವಾಸಿಯಾಗಿದ್ದು ಇಂತಹ ಗ್ರಾಮದಿಂದ ಇಬ್ಬರೂ ವ್ಯಕ್ತಿಗಳನ್ನು ನೇಮಕ ಮಾಡಿದ್ದು ಸಂತೋಷದಾಯಕವಾಗಿದೆ ಎಂದರು.

ಕಲ್ಲೂರು ಹಾಗೂ ಖ್ಯಾಡೆದ ಅವರು ಸಮರ್ಥ ವ್ಯಕ್ತಿ ಸೂಕ್ತವಾಗಿ ನಿಭಾಯಿಸಬಲ್ಲ ವ್ಯಕ್ತಿಗಳಾಗಿದ್ದು, ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡಲಿದ್ದಾರೆ ಎಂದರು.ಕನ್ನಡ ಅಭಿವೃದ್ದಿ ಪ್ರಾಧಿಕಾರದ ನೂತನ ಸದಸ್ಯ ವಿರೂಪಣ್ಣ ಕಲ್ಲೂರು , ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿವರೆಡ್ಡಿ ಖ್ಯಾಡೇದ ಮಾತನಾಡಿ, ಸರ್ಕಾರ ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಮಾರ್ಗದರ್ಶನದಂತೆ ಜವಾಬ್ದಾರಿಯಿಂದ ಕೆಲಸ ಮಾಡಲಾಗುವುದು. ಜಿಲ್ಲೆ, ರಾಜ್ಯದಲ್ಲಿ ಕನ್ನಡ ಪರ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಕನ್ನಡ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿ, ತಾಲೂಕಿನಲ್ಲಿ ಈ ಬಾರಿಯ ವಿವಿದ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ತಾಲೂಕಿನ‌ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದಂತಾಗಿದೆ. ಎಂದು ಹೇಳಿದರು.
ಕಾರಟಗಿ ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಸಾಪ ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳರ, ಪದಾಧಿಕಾರಿಗಳಾದ ಪ್ರವೀಣಕುಮಾರ ಕೋರಿ, ಚಾಂದಪಾಷ, ಅಮರೇಶ ಪಟ್ಟಣಶೆಟ್ಟಿ, ರವಿ ಬಲಿಜ,ವಿನಯ ಮರಾಠಿ, ಶಿವಕುಮಾರ ಸಜ್ಜನ, ಮುಖ್ಯ ಶಿಕ್ಷಕರಾದ ಪರಪ್ಪ ಹಂಚಿನಾಳ, ಬಾಲಾಜಿ,ಅಮರೇಶ ಪಾಟೀಲ,ಜಡಿಯಪ್ಪ‌ ಬೋವಿ, ಸಿದ್ದನಗೌಡ, ಮಲ್ಲಿಕಾರ್ಜುನ ಖ್ಯಾಡೆದ, ನವಲಿ ತಾಂಡ ರಾಮನಾಯಕ್, ರವಿ ಶೆಟ್ಟರ್,ಕಂಠೆಪ್ಪ ಮಡಿವಾಳರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!